ಡೈಲಿ ವಾರ್ತೆ : 31 ಆಗಸ್ಟ್ 2022

ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ; ಹೃದಯ ಕಲಕುವ ವಿಡಿಯೋ ವೈರಲ್…!

ಮಗುವೊಂದು ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮಗಿವಿನ ತಾಯಿ ನಿಧನರಾಗಿದ್ದು, ಮೃತದೇಹವನ್ನು ಸಮಾಧಿ ಮಾಡಲಾಗುತ್ತದೆ. ತಾಯಿಗಾಗಿ ಹಂಬಲಿಸುತ್ತಿದ್ದ ಮಗು ಕೆಲವು ದಿನಗಳ ಬಳಿಕ ಸಮಾಧಿಯ ಬಳಿ ಬಂದು, ತಾಯಿ ಇದರ ಒಳಗೆ ಇದ್ದಾರೆ ಎಂದು ಭಾವಿಸಿ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಮಗು ಇಣುಕಿ ನೋಡಿದೆ.


ಸ್ವಲ್ಪ ಹೊತ್ತು ತಾಯಿಯನ್ನು ಕೂಗಿ ಕರೆಯುವ ಮಗು, ಕೊನೆಗೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದಾಗ ಮಗು ಅತ್ತು ಕರೆಯುತ್ತಿರುವ ದೃಶ್ಯ ಎಂತಹವರ ಹೃದಯ ಕಲಕುವಂತಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಯಿ ಮಕ್ಕಳನ್ನು ಮಾತ್ರ ರಕ್ಷಿಸುವುದಿಲ್ಲ. ಮಕ್ಕಳ ಸುಖವೇ ತನ್ನ ಸುಖ ಎಂದುಕೊಳ್ಳುತ್ತಾಳೆ. ಅವರೇ ತನ್ನ ಪ್ರಪಂಚ ಎಂದುಕೊಳ್ಳುತ್ತಾಳೆ. ಅಮ್ಮನ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು‌ ನೆಟ್ಟಿಗರು ಬರೆದುಕೊಂಡಿದ್ದಾರೆ.