ಡೈಲಿ ವಾರ್ತೆ : 09 ಸೆಪ್ಟೆಂಬರ್ 2022

ಬ್ರಿಟನ್‌ನನ್ನು ಸುದೀರ್ಘ ಕಾಲ ಆಳಿದ ರಾಣಿ 2ನೇ ಎಲಿಝಬೆತ್ ನಿಧನ..!

ಲಂಡನ್ : ಬ್ರಿಟನ್‌ ಅನ್ನು ಸುದೀರ್ಘ ಕಾಲ ಆಳಿದ ರಾಣಿ ಎರಡನೇ ಎಲಿಜಬೆತ್ ತನ್ನ 96ನೇ ವಯಸ್ಸಿನಲ್ಲಿ ನಿಧನರಾದರು. ಅವರು 70 ವರ್ಷಗಳ ಕಾಲ ಬ್ರಿಟನ್‌ನಲ್ಲಿ ಆಳ್ವಿಕೆ ನಡೆಸಿದ್ದರು.

ನಿಧನ ವಾರ್ತೆಯನ್ನು ರಾಜಕುಟುಂಬವು ಖಚಿತಪಡಿಸಿದ್ದು, ರಾಣಿಯು ಮಧ್ಯಾಹ್ನ ಬಲ್ಮೋರ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮಾಡಿದೆ.

70 ವರ್ಷಗಳ ಆಳ್ವಿಕೆಯನ್ನು ನಡೆಸಿದ ರಾಣಿ ಎರಡನೇ ಎಲಿಝೆಬೆತ್ ರ ಸೇವೆಯನ್ನು ಗುರುತಿಸಲು ಜೂನ್ ತಿಂಗಳಲ್ಲಿ ಯುನೈಟೆಡ್ ಕಿಂಗ್‌ಡಂ ಅದ್ದೂರಿಯಾಗಿ ಪ್ಲಾಟಿನಂ ಜುಬಿಲಿ ಆಚರಿಸಿತ್ತು.

2015 ರಲ್ಲಿ, ರಾಣಿ ಎಲಿಜಬೆತ್ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾವನ್ನು ಮೀರಿಸುವ ಮೂಲಕ ಸುದೀರ್ಘ ಕಾಲ ಆಳಿದ ಬ್ರಿಟಿಷ್ ರಾಣಿಯಾದರು. ಈ ವರ್ಷ, ಅವರು ವಿಶ್ವದ ಎರಡನೇ ಅತಿ ಹೆಚ್ಚು ಕಾಲ ಆಳಿದ ರಾಣಿಯಾಗಿ ಗುರುತಿಸಿಕೊಂಡಿದ್ದರು.