ಡೈಲಿ ವಾರ್ತೆ : 25 ಸೆಪ್ಟೆಂಬರ್ 2022

ಕುಂದಾಪುರ. ಸ ಕಿ ಪ್ರಾ ಶಾಲೆ ಕಲ್ಕೆರೆ ಇದರ ಆಶ್ರಯದಲ್ಲಿ ಪೋಷನ್ ಅಭಿಯಾನ್ 2022.

ಕುಂದಾಪುರ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ. ಸ ಕಿ ಪ್ರಾ ಶಾಲೆ ಕಲ್ಕೆರೆ ಇವರ ಜಂಟಿ ಆಶ್ರಯದಲ್ಲಿ ಪೋಷನ್ ಅಭಿಯಾನ್ 2022. ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷೆ ಸುಪ್ರೀತಾ ಶೆಟ್ಟಿ ವಹಿಸಿದ್ದರು.

ಮುಖ್ಯಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿ ಸಹಶಿಕ್ಷಕಿ ಮಂಜುಳಾ ಎಂ ಕಾರ್ಯಕ್ರಮ ನಿರ್ವಹಿಸಿ, ಅತಿಥಿ ಶಿಕ್ಷಕ ಕಿಶನ್ ಕುಮಾರ್ ವಂದಿಸಿದರು.

ಅಂಗನವಾಡಿ ಶಿಕ್ಷಕಿ ರೇಖಾ ಮತ್ತು ಅಂಗನವಾಡಿ ಸಹಾಯಕಿ ಗಿರಿಜಾ ಮತ್ತು ಅಡುಗೆ ಯವರಾದ ಶ್ರೀಮತಿ ವಿಶಾಲ ಶೆಟ್ಟಿ ಸಹಕರಿಸಿದರು.