ವರದಿ : ಕುಮಾರ್ ನಾಯ್ಕ , ಉಪಸಂಪಾದಕರು


ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮಪಂಚಯತ್ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನ್ಯಾಯಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ಕಳೆದ 8 ವರುಷಗಳಿಂದ ಒಟ್ಟಾರೆ 60 ಲಕ್ಷ ರೂಪಾಯಿ ಭ್ರಷ್ಟಾಚಾರ ನಡೆಸಿರುತ್ತಾರೆ, ಭಟ್ಕಳ್ ಪಿ.ಎಲ್.ಡಿ ಬ್ಯಾಂಕ್ ಉದ್ಯೋಗಿ ಆಗಿರುವ ಶೇಖರ್ ನಾರಾಯಣ್ ನಾಯ್ಕ ಕಳೆದ ಹಲವಾರು ವರುಷಗಳಿಂದ ಕನೂನುಬಾಹಿರವಾಗಿ ಯುವಕ ಸಂಘದ ಅಧ್ಯಕ ಹುದ್ದೆಯಲ್ಲಿ ಇದ್ದು ಅಕ್ರಮ ಖಾತೆ ತೆರೆದು 60 ಲಕ್ಷ ರೂಪಾಯಿ ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಗುಮಾಸ್ತ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಗೆ ಸಹಕರಿಸಿರುತ್ತಾನೆ, ಈ ಬಗ್ಗೆ ಎಲ್ಲ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಪ್ಪ ನಾಯ್ಕ ಅವರು ತಹಸೀಲ್ದಾರ್ ಭಟ್ಕಳ ಅವರಿಗೆ ತನಿಖೆ ನಡೆಸಿ ಕ್ರಮ ಕೈಗೊಳಬೇಕೆಂದು ದೂರು ನೀಡಿ ಹಲವಾರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಗ್ರಾಮ ಪಂಚಾಯತ್ ಸದಸ್ಯ ರಾಜು ನಾಯ್ಕ ಆರೋಪಿಸಿದ್ದಾರೆ.

ಮುಂಡಳ್ಳಿ ಗ್ರಾಮಪಂಚಯತ್ ಸದಸ್ಯ ರಾಜು ನಾಯ್ಕ ಪತ್ರಿಕಾಗೋಷ್ಠಿ ನಡೆಸಿ ಮುಂಡಳ್ಳಿ ನ್ಯಾಯಬೆಲೆ ಅಂಗಡಿಯ ಗುಮಾಸ್ತ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನಡೆಸಿರುವ ಭ್ರಷ್ಟಾಚಾರವನ್ನು ಈ ರೀತಿ ವಿವರಿಸಿರುತ್ತಾರೆ, ಗುಮಾಸ್ತನಾಗಿ
ಕಾರ್ಯನಿರವಹಿಸುತ್ತಿರುವ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನ್ಯಾಯ ಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿರುತ್ತಾರೆ, ಮುಂಡಳ್ಳಿ ನ್ಯಾಯಬೆಲೆ ಅಂಗಡಿಯ ,ಸಾಮಗ್ರಿಗಳನ್ನು ಮತ್ತು ದಾನ್ಯಗಳನ್ನು ಕದ್ದು ಹೊರಗಡೆ ಮಾರುಕಟ್ಟೆ ಯಲ್ಲಿ ಮಾರಾಟ ಮಾಡುತ್ತಾರೆ, ಮೀನುಗಾರರಿಗೆ ದೋಣಿಯ ಸೀಮೆ ಎಣ್ಣೆ ಯನ್ನು ಸರಕಾರ ನಿಗದಿಪಡಿಸಿದ ಲೀಟರ್ ಎಣ್ಣೆಗಿಂತ 10 ಲೀಟರ್ ಎಣ್ಣೆ ಕಡಿಮೆ ನೀಡುತ್ತಾರೆ, ಇವನು ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರೆಯುತಿಲ್ಲ, ಈತನು ಮುಂಡಳ್ಳಿ ಗ್ರಾಮಪಂಚಯತ್ ನ ಹಾಲಿ ಸದಸ್ಯನಾಗಿದ್ದು ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ, ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರಿಯುತಿಲ್ಲ ಎಂದು ತಹಸೀಲ್ದಾರ್ರಿಗೆ ತನಿಖೆ ನೆಡೆಸುವಂತೆ ದೂರು ನೀಡಿದೇವೆ,
ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರ ಮತ್ತು ಅವ್ಯವಹಾರವನ್ನು ಯಾರಾದರೂ ಗ್ರಾಮಸ್ಥರು ಗುಮಾಸ್ತನಾದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಹತ್ತಿರ ಪ್ರಶ್ನೆ ಮಾಡಿದರೆ ಈತನು ತನ್ನ ಗೂಂಡಾಗಿರಿ ಪ್ರವತ್ತಿಯನ್ನು ತೋರಿಸುತ್ತ ಜನರನ್ನು ಬೆದರಿಸುವುದು ಮತ್ತು ಜನರಿಗೆ ಹೊಡೆಯುವುದು ಮಾಡುತ್ತಾನೆ, ಗುಮಾಸ್ತನಾದ ಕೃಷ್ಣಪ್ಪ ದುರ್ಗಪ್ಪ ನಯ್ಕ್ ಹಲವು ದುಷ್ಟ ಜನರ ಗೂಂಡಾಪಡೆಯನ್ನು ಕಟ್ಟಿಕೊಂಡಿರುತ್ತಾರೆ, ಯಾರಾದರೂ ನಾಯಯಬೇಳೆ ಅಂಗಡಿಯಲ್ಲಿ ನಡೆಯುವ ಅವ್ಯವಹಾರ ಪ್ರಶ್ನೆ ಮಾಡಿದರೆ ತನ್ನ ಗೂಂಡಾ ಪಡೆಗಳೊಂದಿಗೆ ಅವರ ಮನೆಗೆ ಹೋಗಿ ಹೊಡೆದುಬಡಿದು ಧಮ್ಕಿ ಹಾಕುತ್ತಾರೆ, ಕರೋನ ಸಮಯದಲ್ಲಿ ತನ್ನ ಮನೆಯಲ್ಲಿ ನ್ಯಾಯಬೆಲೆ ಅಂಗಡಿ ಸಾಮಾನುಗಳನ್ನು ಜನರಿಗೆ ಮಾರಾಟ ಮಾಡಿರುತ್ತಾರೆ, ನಿಪಕ್ಷಪಾತವಾಗಿ ತಹಶೀಲ್ದಾರರು ತನಿಖೆ ನಡೆಸುವಂತೆ ಮನವಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.


ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಗುಮಾಸ್ತರದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನ ಅವ್ಯವಹಾರ ಮತ್ತು ಭ್ರಷ್ಟಾಚಾರ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಂಡಳ್ಳಿ ಪಂಚಾಯತ್ ಸದಸ್ಯರಾದ ರಾಜು ಎಲ್ ನಾಯ್ಕ ಪಂಚಾಯತ್ ವತಿಯಿಂದ ತಹಶೀಲ್ದಾರರಿಗೆ ಮನವಿ ನೀಡಿ ಎಷ್ಟೇ ತಿಂಗಳು ಕಳೆದರೂ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ , ಅಧಿಕಾರಿಗಳ ಈ ನಡೆ ನೋಡಿದರೆ ತಮಗೆ ಅಧಿಕಾರಿಗಳು ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನಗಳು ಮೂಡುತದೆ ಎಂದು ಆರೋಪಿಸಿದ್ದಾರೆ. ತಹಸೀಲ್ದಾರ್ ರು 60 ಲಕ್ಷ ಭ್ರಷ್ಟಾಚಾರ ನಡೆಸಿರುವ ಭ್ರಷ್ಟಾಚಾರಿಗಳ ರಕ್ಷಣೆ ಮಾಡಿ ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂಡಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ಆಗಸ್ಟ್ 19 ,2011 ರಿಂದ ಯುವಕ ಮಂಡಲ ಮುಂಡಲಿ ಯ ಮಾನ್ಯತೆ ನವೀಕರಣಗೊಂಡಿಲ್ಲ , 2016 ರಿಂದ ಯಾವುದೇ ಆಡಿಟ್ ಆಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈಗಾಗಲೇ ಈ ಬಗ್ಗೆ ಫುಡ್ ಡಿ.ಡಿ, ಭಟ್ಕಳ್ ಸಹಾಯಕ ಆಯುಕ್ತರು , ಜಿಲ್ಲಾ ಯುವಜನ ಸೇವಾ ಕ್ರೀಡಾ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ರಾಜೇಶ್ ನಾಗಪ್ಪ ನಾಯ್ಕ ಮಾತನಾಡಿ 1 ವಾರದೊಳಗೆ ತಹಶೀಲ್ದಾರರು ಸಮಸ್ಯೆ ಬಗೆಹರಿಸಿ , ನ್ಯಾಯ ದೊರಕಿಸಿಕೊಡ ದಿದ್ದಲ್ಲಿ ಭಟ್ಕಳ ತಹಸೀಲ್ದಾರ್ ಕಚೇರಿ ಎದುರುಗಡೆ ಅರೆಬೆತ್ತಲೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.ಈ ಸಂಧರ್ಭದಲ್ಲಿ ಯುವಕ ಮಂಡಲ್ ಹೊಸ ಸಮಿತಿ ಅಧ್ಯಕ್ಷ ಅರುಣ್ ನಾಯ್ಕ, ಗ್ರಾಮ್ ಪಂಚಾಯತ್ ಅಧ್ಯಕ್ಷ ನಾಗಪ್ಪ ನಾಯ್ಕ , ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ರಾಜೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.