ಡೈಲಿ ವಾರ್ತೆ: 01ಅಕ್ಟೋಬರ್ 2022

ಉಡುಪಿ ತಾಲೂಕು ಆಟೋ ರಿಕ್ಷಾ ನಗರ ಪ್ರವೇಶಕ್ಕೆ ಅವಕಾಶ

ಉಡುಪಿ: ಶಾಸಕ ರಘುಪತಿ ಭಟ್ ಮನವಿ ಮೇರೆಗೆ ಉಡುಪಿ ತಾಲೂಕಿನ ವಿಳಾಸ ಹೊಂದಿರುವ ಎಲ್ಲಾ ರಿಕ್ಷಾಗಳು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

ಉಡುಪಿಯಲ್ಲಿ ಓಡಾಡುವ ಉಡುಪಿ ತಾಲೂಕಿನ ವಿಳಾಸ ಹೊಂದಿರುವ ಆಟೋ ರಿಕ್ಷಾ ಪರವಾನಿಗೆ ಪಡೆದು ಆಟೋರಿಕ್ಷಾಗಳಿಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲೂ ಸಂಚರಿಸಲು ಅವಕಾಶ ಕಲ್ಪಿಸಿ ಪ್ರಧಾನ ಕಾರ್ಯದರ್ಶಿ ಸಾರಿಗೆ ಇಲಾಖೆ ಉಡುಪಿ ಇವರು ಆದೇಶ ಹೊರಡಿಸಿದ್ದಾರೆ.