ಡೈಲಿ ವಾರ್ತೆ: 01ಅಕ್ಟೋಬರ್ 2022

ವರದಿ: ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ

“ಮೈಸೂರು ದಸರಾದಲ್ಲಿ ಮೇಳೈಸಿದ ಸಿರಿಧಾನ್ಯಗಳ ಕಣಜ..!  “ಆರೋಗ್ಯಕರ ಬದುಕಿಗೆ ಸಿರಿಧಾನ್ಯ ರಾಮಬಾಣ….!”

ಸುದ್ದಿ @ಮೈಸೂರು: ಮೈಸೂರು ದಸರಾ.. ಅದೆಷ್ಟು ಸುಂದರ….ಅಂದ್ಹಾಗೆ ಆರೋಗ್ಯಕರ ಬದುಕಿಗೆ ವಿಶೇಷ ರೀತಿಯಲ್ಲಿ ,ಸಿರಿಧಾನ್ಯಗಳ ಬಳಕೆ ಸಿರಿಧಾನ್ಯದಿಂದ ಸಿಗುವಂತಹ ಲಾಭಗಳು ಹಾಗೂ ಸಿರಿಧಾನ್ಯದ ವಿವಿಧ ಪ್ರಖರತೆಗಳನ್ನು ದಸರಾದಲ್ಲಿ ನಾಡಿನ ಜನತೆಗೆ ಪರಿಚಯಿಸಲಾಯಿತು. ಸಿರಿಧಾನ್ಯ ಉತ್ಪನ್ನಗಳನ್ನು ಗ್ರಾಹಕರಿಗೆ ಈ ಮೂಲಕ ತಿಳಿ ಪಡಿಸಲಾಯಿತು.
ಎರಡು ವರ್ಷಗಳ ಕೊರೊನಾ ಆತಂಕದ ಬಳಿಕ ಈ ಬಾರಿ ಮೈಸೂರು ದಸರಾ ಹೊಸ ಕಳೆಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸಿಸುತ್ತಿದ್ದು, ಸಿರಿಧಾನ್ಯ ಆರೋಗ್ಯ ಮೇಳವೂ ಹಲವು ವಿಶಿಷ್ಟ ಉತ್ಪನ್ನಗಳೊಂದಿಗೆ ಜನರನ್ನು ಸೆಳೆಯುತ್ತಿದೆ. ಅರ್ಕ, ನವಣೆ, ಸಜ್ಜೆ, ಊದಲು, ರಾಗಿ ಸಹಿತ ಸಿರಿಧಾನ್ಯಗಳು ಹಾಗೂ ಇತರ ೧೫ಕ್ಕೂ ಅಧಿಕ ಸಾವಯವ ಖಾದ್ಯ ವಸ್ತುಗಳಿಂದ ಸಿದ್ಧಪಡಿಸಿದಂತಹ ಸಂಜೀವಿನಿ ಹೆಲ್ತ್ ಮಿಕ್ಸ್ ಭಾರಿ ಸಂಖ್ಯೆಯಲ್ಲಿ ಸಿರಿಧಾನ್ಯ ಪ್ರಿಯರ ಮನತಟ್ಟಿದೆ.



ದಸರಾ ಹಬ್ಬದ ನಾಲ್ಕನೇ ದಿನವಾದ ಶುಕ್ರವಾರ ಸಿರಿಧಾನ್ಯ ಆರೋಗ್ಯ ಮೇಳದ ೪೧ನೇ ಸ್ಟಾಲ್‌ಗೆ ಭೇಟಿ ನೀಡಿದ ಬೆಳಗಾವಿ ಜಿಲ್ಲೆಯ ಶಾಸಕ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹಿತ ನೂರಾರು ಜನರು ಸಂಜೀವಿನಿ ಉತ್ಪನ್ನಗಳ ಬಗ್ಗೆ ಪರಿಚಯ ಮಾಡಿಕೊಂಡರು. ಮನೋಜವಂ ಹರ್ಬಲ್ ಸೈನ್ಸ್ನ ಸಂಸ್ಥಾಪಕರಾದ ಪ್ರಗತಿಪರ ಕೃಷಿಕ ಸಿದ್ದಮಾರಯ್ಯ ಅವರು ಸಿರಿಧಾನ್ಯದ ಹೆಲ್ತ್ ಮಿಕ್ಸ್ ಸ್ಯಾಂಪಲ್‌ಗಳನ್ನು ಭೇಟಿ ನೀಡಿದ ಎಲ್ಲರಿಗೂ ನೀಡುವ ಮೂಲಕ ಸಿರಿಧಾನ್ಯದಿಂದ ತಯಾರಿಸಿದ ಉತ್ಪನ್ನಗಳ ಪರಿಚಯ ಮಾಡಿಸಿದರು. ಜತೆಗೆ ಸಂಸ್ಥೆಯ ವತಿಯಿಂದ ತಯಾರಿಸಲಾದ ಡಯಾ ಪ್ರೊ, ಬ್ರಾಹ್ಮಿ ಪ್ರೊ, ಹರ್ಬಲ್ ವಾಟರ್‌ಗಳಂತಹ ಉತ್ಪನ್ನಗಳನ್ನೂ ಪರಿಚಯ ಮಾಡಿಸಲಾಯಿತು.

ಆಧುನಿಕ ಜೀವನ ಶೈಲಿ, ಅವಸರದ ಜೀವನ ವಿಧಾನಗಳಿಂದಾಗಿ ಆರೋಗ್ಯ ಬಹಳ ಬೇಗ ಹದಗೆಡುವ ಸ್ಥಿತಿ ಇದ್ದು, ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯವೇ ಪರಿಹಾರ ಎಂಬ ಸ್ಪಷ್ಟ ಸಂದೇಶ ಈ ಮೇಳದಲ್ಲಿ ಮೊಳಗಿತು. ಸಂಜೀವಿನಿ ಬ್ರ್ಯಾಂಡ್ ಹೊರತಂದ ಉತ್ಪನ್ನಗಳು ವಿಶೇಷವಾಗಿ ಜನರ ಗಮನ ಸೆಳೆದವು.ಅದೇ ರೀತಿ ಸಚಿವರಾದ ಸತೀಶ ಜಾರಕಿಹೊಳಿ ಸೇರಿದಂತೆ ,ಅನೇಕ ಸ್ಥಳೀಯ ಗಣ್ಯರು ಇವರ ಸಾಧನೆಯನ್ನು ಪ್ರಶಂಸಿಸಿದರು.ಈ ಆಹಾರ ಮೇಳವು ಅಕ್ಟೋಬರ್ -05 ವರೆಗೆ ನಡೆಯಲಿದೆ.ಸರ್ವರಿಗೂ ಆದರದ ಸ್ವಾಗತ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.