✒️ಓಂಕಾರ ಎಸ್ ವಿ ತಾಳಗುಪ್ಪ


*ಶಿವಮೊಗ್ಗ*:- ಶಿವಮೊಗ್ಗ ಜಿಲ್ಲಾಡಳಿತ ಕೋವಿಡ್ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾದ ಹಿನ್ನೆಲೆ ಶಾಲೆಗಳಿಗೆ ಮೂರು ದಿನ ರಜ ನೀಡಿದ್ದರೂ, ಶಾಲಾ ಮಕ್ಕಳನ್ನು ಕರೆಸಿ ಇವರ ಬರ್ತಡೇ ಕಾರ್ಯಕ್ರಮ ಆಯೋಜನೆ.

ಕಾರ್ಯಕ್ರಮದಲ್ಲಿ ಯಾವುದೇ ಮಾಸ್ಕ್ ಮತ್ತು ಕೋವಿಡ್ ನಿಯಮ ಪಾಲನೆಯಾಗದೇ ಇರುವುದು ಅದಕ್ಕಿಂತ ಮಿಗಿಲಾಗಿ ಶಿವಮೊಗ್ಗ ಜಿಲ್ಲಾಡಳಿತ 3 ದಿನ ಶಾಲೆಗೆ ರಜೆ ಘೋಷಣೆ ಮಾಡಿದ್ದರೂ, ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀ ಅಶೋಕ್ ನಾಯ್ಕ್ ರವರಿಗೆ ಅನ್ವಯಿಸುವುದಿಲ್ಲವೇ…..?! ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು.

ಇವರೆಗೂ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಈ ಖಾಸಗಿ ಶೈಕ್ಷಣಿಕ ಸಂಸ್ಥೆಯ ಆಡಳಿತ ಮಂಡಳಿ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದ ಶಿವಮೊಗ್ಗ ಜಿಲ್ಲಾಡಳಿತ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಾ ಬಡವರಿಗೊಂದು ಕೋವಿಡ್ ನಿಯಮ – ಬಲ್ಲವರಿಗೊಂದು ಕೋವಿಡ್ ನಿಯಮ ಎಂದು ಹಿಡಿಶಾಪ ಹಾಕುತ್ತಿರುವ ಪ್ರಜ್ಞಾವಂತರು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು…. ಇನ್ನೂ ಮುಂದಾದರು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವರೋ ಈ ನಮ್ಮ ಹೆಮ್ಮೆಯ ಶಿವಮೊಗ್ಗ ಜಿಲ್ಲಾಡಳಿತ…..?! ಕಾದು ನೋಡೋಣಾ.