ಡೈಲಿ ವಾರ್ತೆ: 30 ನವಂಬರ್ 2022

ವರದಿ: ಮಾರುತಿ ಬಿ. ಕೊಟ್ಟೂರು.

ಕೊಟ್ಟೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಪರಿಷತ್ ಉದ್ಘಾಟನಾ ಸಮಾರಂಭ

  • ಚುಟುಕು ಸಾಹಿತ್ಯದ ಕೊಡುಗೆ ಅಪಾರ
  • ಡೈಲಿ ವಾರ್ತೆ 24×7

ಕೊಟ್ಟೂರು : ಕನ್ನಡ ಸಾಹಿತ್ಯ ಉಳಿದೆಲ್ಲಾ ಸಾಹಿತ್ಯಕ್ಕಿಂತ ಹೆಚ್ಚು ಪ್ರಕರತೆಯಲ್ಲಿ ವಿಜೃಂಭಿಸಲು ಚುಟುಕು ಸಾಹಿತ್ಯದ ಕೊಡುಗೆಯು ಅಪಾರವಾದದು. ವಾಸ್ತವತೆಯ ಸತ್ಯ ಮತ್ತಿತರ ಆಯಾಮಗಳನ್ನು ಸರಳವಾಗಿ ಜನತೆಗೆ ತಲುಪಿಸುವುದರ ಜೊತೆಗೆ ಸಮಾಜ ದೊಡ್ಡ ಮಟ್ಟದಲ್ಲಿ ಪರಿವರ್ತನೆಯಾಗುವುದಕ್ಕೆ ಚುಟುಕು ಸಾಹಿತ್ಯ ಪ್ರಮುಖ ಕಾರಣವಾಗಿದೆ ಎಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಕುಸುಮ ಸಜ್ಜನ್ ಹೇಳಿದರು.

ಸೋಮವಾರ ಸಂಜೆ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಹೆಚ್.ಜಿ. ರಾಜ್ ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಪರಿಷತ್ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.

ಚುಟುಕು ಸಾಹಿತ್ಯ ಬೇರೆದೇ ರೀತಿಯಲ್ಲಿ ಜಗತ್ತಿಗೆ ಸರ್ವಜನತೆಗೆ ತಲುಪುವಲ್ಲಿ ಅದರಲ್ಲಿನ ಸಾಹಿತ್ಯದ ಸತ್ವ ಪಾತ್ರ ಮುಖ್ಯ. ತ್ರಿಪದಿ, ಷಟ್ಪದಿ, ಚೌಸ್ಪದಿ ಸೇರಿದಂತೆ ಇತರ ಪ್ರಾಕಾರಗಳಲ್ಲಿ ಚುಟುಕು ಸಾಹಿತ್ಯ ಸಾಮಾಜದ ಅಂಕು ಡೊಂಕುಗಳ ನೈಜ ಚಿತ್ರಣವನ್ನು ಪ್ರತಿಪಾದಿಸಿ ಇದರ ಜೊತೆಗೆ ಹಲವು ಬಗೆಯ ನ್ಯೂನ್ಯತೆಗಳನ್ನು ಪರಿಹರಿಸಿದೆ. ದಿವಂಗತ ದ.ರಾ.ಬೇಂದ್ರೆ ಚುಟುಕು ಸಾಹಿತ್ಯಕ್ಕೆ ದೊಡ್ಡ ಪ್ರೇರಕ ಶಕ್ತಿಯಾಗಿ ಕಂಗೋಳಿಸಿದೆ. ಇವರ ಪ್ರೇರಣೆ ಚುಟುಕು ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಹೆಮ್ಮರವಾಗಿ ಹೊರಹೊಮ್ಮಲು ಸಹಕಾರಿಯಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಹಾಲ್ಯಾನಾಯ್ಕ ಚುಟುಕು ಸಾಹಿತ್ಯ ಪರಿಷತ್‌ನ್ನು ವಿಜಯನಗರ ಜಿಲ್ಲೆಯಲ್ಲಿ ಫಲಪ್ರದವಾಗಿ ಸಂಘಟಿಸುವ ನಿಟ್ಟಿನಲ್ಲಿ ಎಲ್ಲಾ ತಾಲೂಕುಗಳ ಘಟಕಗಳನ್ನು ಆಸ್ತಿತ್ವಕ್ಕೆ ತರಲಾಗುತ್ತದೆ ಎಂದರು.

ಚುಟುಕು ಸಾಹಿತ್ಯ ಬೇರುಗಳು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಅಡಗಿವೆ. ಜನಪ್ರಿಯವಾಗುವತ್ತ ಈ ಸಾಹಿತ್ಯ ಕಡಿಮೆ ಅವಧಿಯಲ್ಲಿ ಮುನ್ನೆಡೆದಿದ್ದು ಇದನ್ನು ಪ್ರತಿಯೊಬ್ಬರು ಉಳಿಸಿ ಬೆಳಸಿ ಪೋಷಿಸಿಕೊಂಡು ಹೋಗಬೇಕಿದೆ ಎಂದರು.
ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ.ಶಾಂತಮೂರ್ತಿ ಬಿ.ಕುಲಕರ್ಣಿ ಮಾತನಾಡಿ ಎಲ್ಲಾ ಬಗೆಯ ಸಾಹಿತ್ಯ ಕರಗತ ಮಾಡಿಕೊಳ್ಳುವ ಪ್ರಾಥಮಿಕ ಹಂತವಾಗಿ ಚುಟುಕು ಸಾಹಿತ್ಯದಲ್ಲಿ ತೊಡಗಿಸಿಕೊಂಡಷ್ಟು ಸಮರ್ಥ ಲೇಖಕನಾಗಲು ಸಾಧ್ಯ ಎಂದರು.


ರಂಗಭೂಮಿ ಕಲಾವಿಧ ಕೆ.ಎಸ್.ರುದ್ರೇಶ, ಗಮಕ ವಾಚಕಿ ಪಲ್ಲವಿ, ಕಿರುತರೆ ನಟಿ ಸಿ.ಎಂ.ನಂದಿನಿ,ಶೀಲಾ ಮಹಾದೇವಯ್ಯ, ಡಾ ಮನಸಾಲಿ ಮುರುಳಿಧರ ಶೆಟ್ಟಿ
ಇವರನ್ನು ಸನ್ಮಾನಿಸಲಾಯಿತು. ಎಪಿಎಂಸಿ ಅಧ್ಯಕ್ಷ ಪೂಜಾರ್ ಉಮೇಶ, ಪತ್ರಕರ್ತ ಉಜ್ಜಯಿನಿ ರುದ್ರಪ್ಪ, ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಕೆ.ರಾಮಣ್ಣ, ಚುಟುಕು ಸಾಹಿತ್ಯ ಪರಿಷತ್ ಕೊಟ್ಟೂರು ತಾಲೂಕು ಗೌರವ ಅಧ್ಯಕ್ಷ ಚಿಗಟೇರಿ ಕೊಟ್ರೇಶ, ತಾಲೂಕು ಅಧ್ಯಕ್ಷ ಮಂಜುನಾಥ ಮೊರಗೇರಿ ಮತ್ತಿತರರು ಇದ್ದರು. ತಾಲೂಕು ಅಧ್ಯಕ್ಷ ಮಂಜುನಾಥ ಮೊರಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್.ವಿರೇಶ ಸ್ವಾಗತಿಸಿದರು. ಗಣೇಶ್ ಬಡಿಗೇರ್ ವಂದಿಸಿದರು.
ಪಿ.ಎಂ.ಈಶ್ವರಯ್ಯ ನಿರೂಪಿಸಿದರು.