ಡೈಲಿ ವಾರ್ತೆ: 12 ಡಿಸೆಂಬರ್ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ತಾಳಗುಪ್ಪ ಗ್ರಾಮ & ಹೋಬಳಿಯಲ್ಲಿ ಜಾನವಾರುಗಳಿಗೆ ಮಿತಿ ಮೀರಿದ ಗಂಟುರೋಗ ಕಾಯಿಲೆ – ತಾಳಗುಪ್ಪ ಜಾನವಾರು ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಗಗನಕುಸುಮ – ರೈತರ ಮನವಿಗೆ ಕೂಡಲೇ ಸ್ಪಂದನೆ ನೀಡಿದ ಶಾಸಕ ಕುಮಾರ್ ಬಂಗಾರಪ್ಪ ರವರ ಸರ್ಕಾರಿ ಆಪ್ತ ಸಹಾಯಕ ಉಮೇಶ್ ಗೌಡರ್

ತಾಳಗುಪ್ಪ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ಹಾಗೂ ತಾಳಗುಪ್ಪ ಹೋಬಳಿಯ ವ್ಯಾಪ್ತಿಯಲ್ಲಿ ಜಾನವರುಗಳಿಗೆ ಗಂಟು ರೋಗ ಕಾಯಿಲೆ ಮಿತಿಮೀರಿದ್ದು ಇದರಿಂದ ಜಾನುವಾರುಗಳು ತೀವ್ರ ವೇದನೆ ಪಡುತ್ತಿದ್ದೂ, ರೈತರ ಉಪ ಕಸುಬು ಆದ ಹೈನುಗಾರಿಕೆ ತೀವ್ರ ಸಂಕಷ್ಟದಲ್ಲಿದೆ.



ಗೋವು ರಕ್ಷಕರೆಂದು ಮತ ಪಡೆದು ಕೇಂದ್ರ & ರಾಜ್ಯ ಸರ್ಕಾರದ ಅಧಿಕಾರದ ಗದ್ದುಗೆ ಬಿಜೆಪಿ ಸರ್ಕಾರ, ಜಾನುವಾರು ಆಸ್ಪತ್ರೆಗೆ ಪೂರಕವಾದ ಕೊರತೆಯಿರುವ ವೈದ್ಯರು, ನಿರೀಕ್ಷಕರು, ಸಿಬ್ಬಂದಿಗಳನ್ನೂ ನೇಮಕ ಮಾಡದೇ ಮೂಕರಂತಾದ ಬಿಜೆಪಿ ಸರ್ಕಾರದ ವಿರುದ್ಧ ನೊಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



ತಾಳಗುಪ್ಪದ ಜಾನವರು ಆಸ್ಪತ್ರೆಯಲ್ಲಿ ವೈದ್ಯರ ಅಲಭ್ಯ ಬಗ್ಗೆ ಮೊಬೈಲ್ ಮೂಲಕ ಜಾನವಾರುಗಳಿಗೆ ಗಂಟು ರೋಗದ ಬಗ್ಗೆ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ರವರ ಸರ್ಕಾರಿ ಆಪ್ತ ಸಹಾಯಕರಾದ ಉಮೇಶ್ ಗೌಡರ್ ರವರ ಬಳಿ ಮಾಹಿತಿ ತಿಳಿಸಿದಾಗ, ಕೂಡಲೇ ಉತ್ತಮ ಸ್ಪಂದನೆ ನೀಡಿದ ಕುಮಾರ್ ಬಂಗಾರಪ್ಪ ರವರ ಆಪ್ತ ಸಹಾಯಕ ಉಮೇಶ್ ಗೌಡರ್ ತಾಳಗುಪ್ಪ ಜಾನವರು ಆಸ್ಪತ್ರೆಗೆ ನಿಯೋಜನೆ ಮಾಡಿದ ವೈದ್ಯರಿಗೆ ವಾರದಲ್ಲಿ ಎರಡೂ ದಿನವಾದರೂ ತಾಳಗುಪ್ಪ ಜಾನವಾರು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಸಾಗರ ಉಪ ನಿರ್ದೇಶಕರು ಜಾನವರು ವಿಭಾಗದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಮಾಹಿತಿ ನೀಡಿದರು.