ಡೈಲಿ ವಾರ್ತೆ: 29 ಡಿಸೆಂಬರ್ 2022

ಭಾರತೀಯ ಸಂಸ್ಥೆ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿದ 18 ಮಕ್ಕಳು ಸಾವು

ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯವು ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿದ ನಂತರ ದೇಶದಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿಕೊಂಡಿರುವ ಬಗ್ಗೆ ವರದಿಯಾಗಿದೆ.

ನೋಯ್ಡಾದ ಮೇರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಔಷಧಿ ಇದು ಎನ್ನಲಾಗಿದೆ.
ಘಟನೆಯ ಕುರಿತು ಭಾರತ ಸರಕಾರ ತನಿಖೆಗೆ ಆದೇಶಿಸಿದ್ದು, ಈ ಕುರಿತ ಸತ್ಯಾಸತ್ಯತೆ ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಿದೆ.

ಔಷಧ ತಯಾರಿಕಾ ಕಂಪನಿಯ ವಿರುದ್ಧ ಉಜ್ಬೇಕಿಸ್ತಾನ್‌ನ ಸರಕಾರ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ.

ಶೀತ ಕಡಿಮೆ ಮಾಡುವ ಡಾಕ್‌ ಒನ್‌ ಮ್ಯಾಕ್ಸ್‌ ಎಂಬ ಔಷಧಿಯ ಸೇವನೆಯಿಂದ ಹದಿನೆಂಟು ಮಕ್ಕಳು ಮೃತಪಟ್ಟಿದ್ದಾರೆ ಅದರಲ್ಲಿ ಎಥಿಲೆನ್‌ ಗ್ಲೈಕಾಲ್‌ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಸಾಬೀತಾಗಿದೆ ಎಂದು ಉಜ್ಬೆಕಿಸ್ತಾನದ ನ್ಯೂಸ್‌ ವೆಬ್‌ಸೈಟ್‌ ಎಕೆಐ.ಕಾಂ ವರದಿ ತಿಳಿಸಿದೆ.

ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಡಾಕ್-1 ಮ್ಯಾಕ್ಸ್ ಸಿರಪ್ ಸೇವಿಸಿದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ, ತೀವ್ರವಾದ ಉಸಿರಾಟದ ಕಾಯಿಲೆ ಹೊಂದಿರುವ 21 ಮಕ್ಕಳಲ್ಲಿ 18 ಮಕ್ಕಳು ಡಾಕ್ -1 ಮ್ಯಾಕ್ಸ್ ಸಿರಪ್ ತೆಗೆದುಕೊಂಡ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.