ವರದಿ : ಓಂಕಾರ್ ಎಸ್ ವಿ ತಾಳಗುಪ್ಪ

ಸಾಗರ : ರಾಜ್ಯದಲ್ಲೇ ಅತೀ ದೊಡ್ಡ ಜಾತ್ರೆಗಳಲ್ಲಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಒಂದಾಗಿದ್ದೂ ಕೋಟ್ಯಂತರ ರೂಪಾಯಿ ಆದಾಯ ಹೊಂದಿದ ಈ ಜಾತ್ರೆಯು ಕಳೆದ ಹಲವು ದಿನಗಳಿಂದ ಶ್ರೀ ಮಾರಿಕಾಂಬ ದೇವಿ ಜಾತ್ರೆಯ ಲೆಕ್ಕಪತ್ರ ನೀಡುವಂತೆ ಒತ್ತಾಯ ಮಾಡುತ್ತಿರುವ ಹಲವು ಸಂಘಟನೆಗಳು, ಇದರ ಬೆನ್ನಲ್ಲೇ ಇಂದು ಶ್ರೀ ಮಾರಿಕಾಂಬ ವ್ಯವಸ್ಥಾಪಕರ ಸಮಿತಿಯವರು ಸರ್ವ ಸದಸ್ಯರ ಸಭೆ ಕರೆಯಲಾಗಿದ್ದು, ಈ ಸಭೆಯು ಹಲವು ಗೊಂದಲದಿಂದ ಕೂಡಿದ್ದು, ಸ್ಥಳೀಯ ಶಾಸಕರಾದ ಶ್ರೀ ಹರತಾಳು ಹಾಲಪ್ಪ, ಸಾಗರ ಉಪ ವಿಭಾಗೀಯ ಅಧಿಕಾರಿಗಳನ್ನು, ಸಭೆಗೆ ಅಹ್ವಾನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.



ಸಭೆ ಪ್ರಾರಂಭವಾಗುತ್ತಿದ್ದಂತೆ ಸಭೆಯ ಮುಂಭಾಗದ ಗೇಟಿನ ಬಳಿ ಹಲವು ಯುವಕರು ಸದಸ್ಯರಲ್ಲದವರನ್ನು ಒಳಗೆ ಬಿಟ್ಟುಕೊಂಡು ಸದಸ್ಯರನ್ನು ಹೊರಗೆ ನಿಲ್ಲಿಸಿದ್ದಾರೆಂದು ಪ್ರತಿಭಟನೆಗೆ ಮುಂದಾದರು.
ಹಲವು ಸಮಯ ಯುವಕರು ಹಾಗೂ ಪೊಲೀಸರ ನಡುವೆ ಜಟಾಪಟಿ ಕೂಡ ನಡೆಯಿತು.
ಬೇಕೇ ಬೇಕು ನ್ಯಾಯ ಬೇಕು !! ಅಯ್ಯಯ್ಯೋ ಅನ್ಯಾಯ ಎಂಬ ಘೋಷಣೆಗಳು ಸಭೆಯ ಮುಂಭಾಗ ಕೇಳಿಬರುತ್ತಿತ್ತು.




ಇನ್ನೂ ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ಈ ಸರ್ವಸದಸ್ಯರ ಸಭೆಗೆ ಸಾಗರದ ಶಾಸಕರಾದ ಹರತಾಳು ಹಾಲಪ್ಪನವರಿಗೆ ಹಾಗೂ ಸಾಗರದ ಎ ಸಿ ಡಾ।।ನಾಗರಾಜ್ ರವರಿಗೆ ಆಮಂತ್ರಣವೇ ನೀಡಲಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದರು.



ಇನ್ನೂ ಈ ಸಭೆಯ ಹೊರಭಾಗದಲ್ಲಿ ನಿಂತಿದ್ದಂತಹ ಯುವಕರ ತಂಡ ಈ ಸಭೆಗೆ ಸಾಗರ ಶಾಸಕ ಹರತಾಳು ಹಾಲಪ್ಪನವರು ಬರಲೇಬೇಕೆಂಬ ಪಟ್ಟುಹಿಡಿದರು.