ಡೈಲಿ ವಾರ್ತೆ:24 ಜನವರಿ 2023

ಕಾರವಾರ: ಉಪನ್ಯಾಸಕಿ ತರಗತಿಯಲ್ಲೇ
ಹೃದಯಾಘಾತದಿಂದ ಮೃತ್ಯು

ಕಾರವಾರ: ಹೃದಯಾಘಾತದಿಂದ ಉಪನ್ಯಾಸಕಿ ಮೃತಪಟ್ಟ ಘಟನೆ ಕಾರವಾರದಲ್ಲಿ ನಡೆದಿದೆ.

ಅನುಷಾ ಶೆಟ್ಟಿ (27) ಮೃತ ಉಪನ್ಯಾಸಕಿ. ಅನುಷಾ ಅವರು ಕಾರವಾರ ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 6 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅನುಷಾ ಪಾಠ ಮಾಡುತ್ತಿದ್ದಾಗಲೇ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದಾರೆ.