ವರದಿ-ಕುಮಾರ ನಾಯ್ಕ. ಉಪಸಂಪಾದಕರು

ಬಾಗಲಕೋಟೆ : ಖಾನಾಪುರ-ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕಳಕಿ ಗ್ರಾಮದವರಾದ ಸದ್ಯ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಸ್.ಬಿ ಮಾಳಗೊಂಡ.

ಇವರು 2000 ಕ್ಕೂ ಹೆಚ್ಚಿನ ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಮಿತ್ತ ಕೇಂದ್ರ ಬಸವ ಸಮಿತಿ ಮತ್ತು ಸ್ವಾವಲಂಬನ ಫೌಂಡೇಶನ್ ವತಿಯಿಂದ ಕಾರ್ಮಿಕ ಮುಖಂಡರಾದ ಶ್ರೀ ಸಂತೋಷ ಕೊಳವಿಯವರು ವಚನ ಗ್ರಂಥಗಳನ್ನು ನೀಡಿ ಸತ್ಕರಿಸಿದರು.

ಪೊಲೀಸ್ ಅಧಿಕಾರಿಯಾಗಿ ಬಿಡುವಿಲ್ಲದ ಕಾರ್ಯದಲ್ಲಿಯೂ ಸಾಹಿತ್ಯದ ಕೃಷಿ ಮಾಡುತ್ತಿರುವುದು ಅವರ ಶ್ರದ್ದೆಯನ್ನು ತೋರಿಸುತ್ತದೆ ಎಂದು ಕೊಳವಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಹಿಂದೊಮ್ಮೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಉಸಿರಾಗಲಿ ಕನ್ನಡ ಎಂಬ ವಿಷಯದ ಮೇಲೆ ಕೊಡಗಿನ ಓಂ ಬಳಗ ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಸತೀಶ್ ಮಾಳಗೊಂಡ ಅವರಿಗೆ ದ್ವೀತಿಯ ಬಹುಮಾನ ಲಭಿಸಿದ್ದು ಅವರ ಸಾಹಿತ್ಯ ಪ್ರತಿಭೆಗೆ ಹಿಡಿದ ಕೈಗನ್ನಡಿ ಎಂದರು.

ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಎನ್.ಆರ್ ಠಕ್ಕಾಯಿ ಮಾತನಾಡಿ ಮಾಳಗೊಂಡ ಅವರು ಕನ್ನಡ ಭಾಷೆಯನ್ನು ಲೀಲಾಜಾಲವಾಗಿ ಬಳಸುವುದರ ಜೊತೆಗೆ ಅರ್ಥಗರ್ಭಿತ ಹಾಗೂ ಬದುಕಿನ ಸತ್ಯವನ್ನು ತಿಳಿಸುವ ಕವಿತೆಗಳನ್ನು ರಚಿಸಿದ್ದಾರೆ ಎಂದು ಹೇಳಿದರು.