ಡೈಲಿ ವಾರ್ತೆ:01 ಫೆಬ್ರವರಿ 2023
ಕೇಂದ್ರ ಬಜೆಟ್: ಸಿಗರೇಟ್ ಪ್ರಿಯರಿಗೆ ಶಾಕ್, ಚಿನ್ನ, ಬೆಳ್ಳಿ, ವಜ್ರ ಕೂಡ ದುಬಾರಿ.!
ಕೇಂದ್ರ ಬಜೆಟ್—2023 ಮಂಡನೆಯಾಗುತ್ತಿದ್ದು, ಬಜೆಟ್ ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಧೂಮಪಾನಿಗಳಿಗೆ ಬಜೆಟ್ ನಲ್ಲಿ ಶಾಕ್ ನೀಡಲಾಗಿದ್ದು ಸಿಗರೇಟ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.
ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್ ಗೆ ಕೇಂದ್ರ ಬಜೆಟ್ ನಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಬ್ರಾಂಡೆಡ್ ಬಟ್ಟೆಗಳ ಬೆಲೆ ಕೂಡ ಏರಿಕೆ ಮಾಡಲಾಗಿದೆ.
ಚಿನ್ನ ಬೆಳ್ಳಿ, ಪ್ಲಾಟಿನಂ, ವಜ್ರಗಳ ಬೆಲೆ ಕೂಡ ಏರಿಕೆ ಮಾಡಲಾಗಿದೆ. ಈ ಮೂಲಕ ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ವಜ್ರ ಇನ್ನು ಮುಂದೆ ದುಬಾರಿಯಾಗಿರಲಿದೆ.