ಡೈಲಿ ವಾರ್ತೆ:03 ಫೆಬ್ರವರಿ 2023

ಬಿಸಿ ರೋಡ್ : ರೈಲ್ವೆ ಓವರ್ ಬ್ರಿಡ್ಜ್‌‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬಂಟ್ವಾಳ: ಬಿಸಿರೋಡಿನ ಮುಖ್ಯ ವೃತ್ತದ ಬಳಿ ರೈಲ್ವೆ ಓವರ್ ಬ್ರಿಡ್ಜ್‌‌ನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಫೆ.3 ರಂದು ಪತ್ತೆಯಾಗಿದೆ.

ಸುಮಾರು 55 ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಫೆ.2 ರಂದು ಗುರುವಾರ ಅಪರಿಚಿತ ವ್ಯಕ್ತಿ ಅಮಲು ಪದಾರ್ಥ ಸೇವಿಸಿ ಮಲಗಿದ್ದ ಎಂದು ಹೇಳಲಾಗಿದೆ.

ಇಂದು ಬೆಳಿಗ್ಗೆ ಸಾರ್ವಜನಿಕರು ಮೃತದೇಹವನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಎಸ್. ಐ.ರಾಮಕೃಷ್ಣ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.