ಡೈಲಿ ವಾರ್ತೆ:05 ಫೆಬ್ರವರಿ 2023

ಕೋಟ ಹಿರೇಮಹಾಲಿಂಗೇಶ್ವರ ಮನ್ಮಹಾರಥೋತ್ಸವ ಸಂಪನ್ನ

ಕೋಟ: ಶ್ರೀಮಹತೋಭಾರ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಇಲ್ಲಿನ ವಾರ್ಷಿಕ ಮನ್ಮಹಾರಥೋತ್ಸವ ಫೆ. 5ರಂದು ಜರಗಿತು.

ಈ ಪ್ರಯುಕ್ತ ಬೆಳಗ್ಗೆ ರಥಾರೋಹಣ, ಸಂಜೆ ಕೋಟ ಅಮೃತೇಶ್ವರೀ ಸರ್ಕಲ್‌ ತನಕ ರಾಜ ಮಾರ್ಗದಲ್ಲಿ
ಮೆರವಣಿಗೆಯೊಂದಿಗೆ ರಥಾವರೋಹಣ ಜರಗಿತು. ಹಿರೇ ಮಹಾಲಿಂಗೇಶ್ವರ ಮಿತ್ರವೃಂದದ ನೇತೃತ್ವದಲ್ಲಿ ಅಪರಾಹ್ನ ಅನ್ನಸಂತರ್ಪಣೆ ನೆರವೇರಿತು, ಜಾತ್ರೆಗೆ ಆಗಮಿಸಿದ ಸಾವಿರಾರು ಮಂದಿ ಭಕ್ತರು ಅನ್ನಪ್ರಸಾಧ ಸ್ವೀಕರಿಸಿದರು.

ವಿಶೇಷ ಆಕರ್ಷಣೆ:-
ರಥೋತ್ಸವದ ಸಂದರ್ಭ ಕೀಲು ಕುದುರೆ, ಡೊಳ್ಳು
ಕುಣಿತ, ಚಂಡೆವಾದನ, ಸುಡುಮದ್ದು ಪ್ರದರ್ಶನ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ನೇತೃತ್ವದಲ್ಲಿ ನಡೆಯಿತು.ರಾತ್ರಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪೆರ್ಡೂರು ಮೇಳದವರಿಂದ ಯಕ್ಷಗಾನ ನೆರವೇರಿತು. ದೇಗುಲದ ವ್ಯವಸ್ಥಾಪನ ಸಮಿತಿಯವರು ಹಾಗೂ ಮಿತ್ರವೃಂದದ ಪ್ರಮುಖರು, ಅರ್ಚಕರು, ತಂತ್ರಿಗಳು, ಸ್ಥಳೀಯ ಗಣ್ಯರು ಜಾತ್ರೆಯ ನೇತೃತ್ವ ವಹಿಸಿದ್ದರು.