ಡೈಲಿ ವಾರ್ತೆ:11 ಫೆಬ್ರವರಿ 2023

ಕಾಸರಗೋಡು: ಮಾದಕವಸ್ತು ಸಹಿತ ಇಬ್ಬರು ಆರೋಪಿಗಳ ಬಂಧನ

ಕಾಸರಗೋಡು: ಎಂಡಿಎಂಎ ಮಾದಕವಸ್ತು ಸಹಿತ ಇಬ್ಬರು ಆರೋಪಿಗಳನ್ನು ಬೇಕಲ ಠಾಣಾ ಪೊಲೀಸರು ಶನಿವಾರ ಬಂಧಿಸಿರುವುದಾಗಿ ವರದಿಯಾಗಿದೆ.

ಚೆರ್ಕಳದ ಶರೀಫ್, ನಾಯಮ್ಮರಮೂಲೆಯ ಮಿರ್ಶಾದ್ ಅಲಿ ಬಂಧಿತರು ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಉದುಮ ಸಮೀಪದ ಬಾಡಿಗೆ ಮನೆಯೊಂದರಿಂದ ಆರೋಪಿಗಳನ್ನು ಬಂಧಿಸಿದ್ದು, 35 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.