ಡೈಲಿ ವಾರ್ತೆ:12 ಫೆಬ್ರವರಿ 2023
ಜಾಮಿಯಾ ಮಸ್ಜಿದ್ ಕೋಟ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ಕೋಟ : ಜಾಮಿಯಾ ಮಸ್ಜಿದ್ ಕೋಟ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 10 ರಂದು ಶುಕ್ರವಾರ ಕೋಟ ಜಾಮಿಯಾ ಮಸ್ಜಿದ್ ಖತೀಬ್ ಮೂಮೀನ್ ಅಷ್ಪಾಕ್ ನಾಗೂರು ರವರ ದುವಾದೊಂದಿಗೆ ಉಡುಪಿ ಜಿಲ್ಲಾ ವಕ್ಫ್ ಸಲಹ ಸಮಿತಿಯ ಅಧ್ಯಕ್ಷ ಸಿ.ಹೆಚ್. ಅಬ್ದುಲ್ ಮುತ್ತಲಿ ವಂಡ್ಸೆರವರ ಉಪಸ್ಥಿತಿಯಲ್ಲಿ ಹಾಗೂ ಕೆ. ಎಂ. ಸಲೀಮ್ ಅವರ ಅಧ್ಯಕ್ಷತೆಯೊಂದಿಗೆ ಕಾರ್ಯಕ್ರಮ ಜರಗಿತು.
2023 ರಿಂದ 2026ರ ಸಾಲಿನ 3ವರ್ಷ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಕೆ. ಎಂ. ಸಲೀಮ್
ಉಪಾಧ್ಯಕ್ಷ: ವಾಹಿದ್ ಅಲಿ
ಪ್ರಧಾನ ಕಾರ್ಯದರ್ಶಿ: ಬಶೀರ್ ಕೆ.
ಖಜಾಂಜಿ: ಕೆ. ಅಬ್ದುಲ್ ಬಶೀರ್
ಹಾಗೂ ಸದಸ್ಯರು
ಹಾಜಿ ಇಬ್ರಾಹಿಂ ಸಾಹೇಬ್, ಇಸ್ಮಾಯಿಲ್ ಸಾಹೇಬ್, ಅಬಿದುಲ್ಲಾ ಬಾರಿಕೆರೆ, ಮುಸ್ತಾಪ ಪಡುಕರೆ, ಅಬಿದ್ ಹುಸೇನ್, ಅಬ್ದುಲ್ ಸಿರಾಜ್, ಬಿ. ಎನ್. ಮುಹಾಪೀಸ್ ಈ ಏಳು ಮಂದಿ ಸದಸ್ಯರನ್ನೊಳಗೊಂಡ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.