ಡೈಲಿ ವಾರ್ತೆ:13 ಫೆಬ್ರವರಿ 2023

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ವಜ್ರ ಸಾಗಾಟ: 2.60 ಕೋ.ರೂ. ಮೌಲ್ಯದ ವಜ್ರ ವಶಕ್ಕೆ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಭಾರತದಿಂದ ದುಬಾೖಗೆ ಅಕ್ರಮವಾಗಿ ವಿಮಾನದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬಾೖಗೆ ತೆರಳುತ್ತಿದ್ದ ಭಟ್ಕಳದ ಅನಾಸ್‌ ಮತ್ತು ಅಮ್ಮರ್‌ ತಮ್ಮ ಶೂ ಮತ್ತು ಬ್ಯಾಗ್‌ ಅಡಿಯಲ್ಲಿ ಅನುಮಾನ ಬಾರದಂತೆ ವಜ್ರವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು.
ಮಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಶನ್‌ ವಿಭಾಗದಲ್ಲಿ ತಪಾಸಣೆ ವೇಳೆ ಇದು ಪತ್ತೆಯಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಈ ವಜ್ರವನ್ನು ಅವರು ಮುಂಬಯಿಯಿಂದ ತಂದಿದ್ದರು ಎನ್ನಲಾಗಿದೆ