ಡೈಲಿ ವಾರ್ತೆ:14 ಫೆಬ್ರವರಿ 2023

ಕಾರು ತಡೆಯಲು ಯತ್ನಿಸಿದ ಟ್ರಾಫಿಕ್‌ ಪೇದೆಯನ್ನೇ ಎಳೆದೊಯ್ದ ಚಾಲಕ: (ವಿಡಿಯೋ ವೈರಲ್)

ಮಹಾರಾಷ್ಟ್ರ: ಸಿಗ್ನಲ್‌ ತಪ್ಪಿಸಿಕೊಂಡು ಹೋಗುತ್ತಿದ್ದ ಕಾರಣಕ್ಕೆ ಕಾರನ್ನು ತಡೆಯಲು ಯತ್ನಿಸಿದ ಟ್ರಾಫಿಕ್‌ ಪೊಲೀಸ್‌ ಪೇದೆಯನ್ನೇ ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ನಲ್ಲಿ ಇತ್ತೀಚೆಗೆ ನಡೆದಿದೆ.

ಭಾನುವಾರ ಸಂಜೆ ವಸಾಯಿ ಪ್ರದೇಶದಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಟ್ರಾಫಿಕ್‌ ಪೊಲೀಸ್‌ ಪೇದೆಯೊಬ್ಬರು ನಿಂತಿದ್ದರು. ಈ ವೇಳೆ ಕಾರೊಂದು ಸಿಗ್ನಲ್‌ ಜಂಪ್‌ ಮಾಡಿಕೊಂಡು ಹೋಗಿದೆ.

ಕಾರನ್ನು ತಡೆಯಲು ಯತ್ನಿಸಿದ ಪೇದೆಯನ್ನೇ ಚಾಲಕ ಕಾರಿನ ಬಾನೆಟ್ ಮೇಲೆ ಕೆಲ ದೂರ ಎಳೆದೊಯ್ದಿದ್ದಾನೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ.

ಚಾಲಕ ಅಪ್ರಾಪ್ತನಾಗಿದ್ದು, ಆತನ ಬಳಿ ಲೈಸೆನ್ಸ್ ಇರಲಿಲ್ಲ. ಪೊಲೀಸರು ತಡೆಯಲು ಯತ್ನಿಸಿದಾಗ ಆತನ ಭೀತಿಯಿಂದ ವಾಹನವನ್ನು ಓಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.