ಡೈಲಿ ವಾರ್ತೆ:21 ಫೆಬ್ರವರಿ 2023

ಬಾಲಕನನ್ನು ಕಚ್ಚಿ ಕೊಂದ ಬೀದಿ ನಾಯಿಗಳು

ಹೈದರಾಬಾದ್: ಬಾಲಕನನ್ನು ಬೀದಿ ನಾಯಿಗಳು ಕಚ್ಚಿ ಕೊಂದಿರುವ ಭೀಕರ ಘಟನೆ ಹೈದರಾಬಾದ್’ನಲ್ಲಿ ನಡೆದಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ದಾಳಿ ಮಾಡುತ್ತವೆ. ಈ ಸಂದರ್ಭ ಬಾಲಕ ಕೆಳಗೆ ಬೀಳುತ್ತಾನೆ. ಬಳಿಕ, ಪದೇ ಪದೇ ನಾಯಿಗಳು ಆತನನ್ನು ಕಚ್ಚುತ್ತಿರುವುದು ಕಾಣಬಹುದು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಂದೆ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟೊತ್ತಿಗೆ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಬಾಲಕ ಕೊಂಡೊಯ್ಯತ್ತಿದ್ದ ಆಹಾರ ಪೊಟ್ಟಣದ ವಾಸನೆ ಗ್ರಹಿಸಿದ ನಾಯಿಗಳು ದಾಳಿ ಮಾಡಿವೆ ಎಂದು ಹೈದರಾಬಾದ್ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.