ಡೈಲಿ ವಾರ್ತೆ: 08/ಮೇ /2024

ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲು

ರಾಯಚೂರು: ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ರಾಯಚೂರು ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕ ಜೇಗರ್‌ಕಲ್ ಮಲ್ಲಾಪೂರು ಗ್ರಾಮದ ವಿನಾಯಕ (10) ಎಂದು ಗುರುತಿಸಲಾಗಿದೆ.
ಮೃತ ಬಾಲಕ ಮಂಗಳವಾರ ಕುಟುಂಬಸ್ಥರೊಂದಿಗೆ ಈಜು ಕಲಿಯಲು ಪಕ್ಕದೂರು ಹೆಂಬೆರಾಳದ ಹಳ್ಳಕ್ಕೆ ಹೋಗಿದ್ದ. ನೀರಿನ ಆಳ ಹೆಚ್ಚಿದ್ದ ಕಡೆ ವಿನಾಯಕ ಈಜಲು ತೆರಳಿದ್ದ. ಈಜು ಬಾರದ ಹಿನ್ನೆಲೆ ನೀರುಪಾಲಾಗಿದ್ದಾನೆ.

ಸ್ಥಳೀಯರು ಹಳ್ಳದಲ್ಲಿ ವಿನಾಯಕನ ಮೃತದೇಹವನ್ನು  ಪತ್ತೆಹಚ್ಚಿ ಹೊರ ತೆಗೆದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.