ಡೈಲಿ ವಾರ್ತೆ: 09/ಮೇ /2024

ಗಂಗೊಳ್ಳಿ ತೌಹೀದ್‌ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ ಎಸ್‌.ಎಲ್‌.ಸಿ.ಯಲ್ಲಿ ಶೇಕಡಾ 100% ಫಲಿತಾಂಶ

ಗಂಗೊಳ್ಳಿ: ತೌಹೀದ್‌ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ಈ ಬಾರಿಯೂ ಗಮನ ಸೆಳೆದಿದ್ದು ಒಟ್ಟು 51 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ವಿಶಿಷ್ಠ ಶ್ರೇಣಿಯಲ್ಲಿ 06 ಮತ್ತು ಪ್ರಥಮ ಶ್ರೇಣಿ 38 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪಾಸ್‌ ಪರ್ಸಂಟೇಜ್‌ ಶೇಕಡಾ 100 ಆಗಿದ್ದು ಶಾಲೆಯಲ್ಲಿ ಅಗ್ರಸ್ಥಾನದಲ್ಲಿ ಕುಮಾರಿ ಆಯಾಶಾ ರುಹಾ 570 ಅಂಕಗಳೊಂದಿಗೆ ಶೇಕಡಾ 91.2ನ್ನು ಪಡೆದಿರುತ್ತಾರೆ.

ಶೀಮಾಝ್‌ ಆಸೀಪ್‌ ಶೇಖ್‌ (559, 89.44%), ಅಮೀನಾ ಇಬ್ರಾಹಿಂ ಚೌಗುಲೆ (550, 88%), ಮಾರೀಯಾ ನಾಕುದಾ (550, 88%), ಸಮರಾ ಮೌಲಾನಾ (544, 87.04%) ಹಾಗೂ ಝೋಹ್ರಾ ಅರ್ಷಿಯಾ ಬೆದ್ರೆ(536, 85.76%) ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.