ಡೈಲಿ ವಾರ್ತೆ: 23/ಜೂ./2024

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಬಂಧನ!

ಹಾಸನ: ಸಲಿಂಗ ಕಾಮದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಅರೆಸ್ಟ್ ಮಾಡಲಾಗಿದೆ.
ಕಳೆದ ರಾತ್ರಿ ಸೂರಜ್ ರೇವಣ್ಣ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸೆನ್ ಠಾಣಾ ಪೊಲೀಸರು ಇದೀಗ ಸೂರಜ್ ಬಂಧಿಸಿದ್ದಾರೆ.

ಸಂತ್ರಸ್ತನ ದೂರು ಆಧಾರಿಸಿ ನಿನ್ನೆ ರಾತ್ರಿ ಪೊಲೀಸರು ಸೂರಜ್ ರೇವಣ್ಣ ವಶಕ್ಕೆ ಪಡೆದಿದ್ದರು. ಮುಂಜಾನೆ ನಾಲ್ಕು ಗಂಟೆ ವರೆಗೂ ಸೂರಜ್ ರೇವಣ್ಣ ವಿಚಾರಣೆ ಮಾಡಿದ ಪೊಲೀಸರು ಇಂದು ಬೆಳಗ್ಗೆ ಬಂಧನ ಖಚಿತಪಡಿಸಿದ್ದಾರೆ.

ಸಂತ್ರಸ್ತನ ದೂರಿನ ಆಧಾರದಲ್ಲಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಸೂರಜ್ ರೇವಣ್ಣ ವಿಚಾರಣೆ ನಡೆಸಲಾಗಿತ್ತು. ಹೊಳೆನರಸೀಪುರ ಗ್ರಾಮಾಂತರ ‌ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ಪ್ರಕರಣ ದಾಖಲಾಗಿತ್ತು. ಸಿ.ಆರ್‌ ನಂ. 92/2024ರಲ್ಲಿ ಸೂರಜ್ ವಿರುದ್ದ ಐಪಿಸಿ ಸೆಕ್ಷನ್ 377,506,342,34 ರ ಅಡಿ ದೂರು ದಾಖಲಾಗಿದೆ.