



ಡೈಲಿ ವಾರ್ತೆ: 06/JUNE/2025


ತೀರ್ಥಹಳ್ಳಿ| ಯುವ ವಕೀಲ, ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

ತೀರ್ಥಹಳ್ಳಿ: ಯುವ ವಕೀಲ, ಬಿಜೆಪಿ ಮುಖಂಡರಾದ ಮಧುಕರ ಮಯ್ಯ ಎಂಬುವರ ಮೇಲೆ ನಾಲ್ವರಿಂದ ಹಲ್ಲೆ ನಡೆಸಲಾಗಿದೆ.
ಇಂದು 4 ಗಂಟೆಯ ವೇಳೆಗೆ ಪಟ್ಟಣದ ಸಿಬಿನಕೆರೆಯ ಬಳಿ ಮಯ್ಯ ಅವರನ್ನು ಕೋರ್ಟ್ ಬಳಿಯಿಂದ ಬೆನ್ನಟ್ಟಿ ರಾಡ್ ನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸದ್ಯ ಮಧುಕರ ಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.