ಡೈಲಿ ವಾರ್ತೆ: 09/JUNE/2025

ಒಂದೇ ಗುಂಡಿಯೊಳಗೆ ಬಿದ್ದ ಹುಲಿ ಮತ್ತು ನಾಯಿ – ಅರಣ್ಯ ಇಲಾಖೆಯಿಂದ ರಕ್ಷಣೆ!

ಇಡುಕ್ಕಿ: 9 ಅಡಿ ಆಳದ ಗುಂಡಿಯೊಳಗೆ ನಾಯಿ ಮತ್ತು ಹುಲಿ ಬಿದ್ದು ಅರಣ್ಯ ಇಲಾಖೆ ರಕ್ಷಿಸಿದ ಘಟನೆ ಭಾನುವಾರ ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿನ ಮಯಿಲದುಂಪರೈ ಎಂಬಲ್ಲಿ ನಡೆದಿದೆ.

ನಾಯಿಯನ್ನು ಹುಲಿಯು ಬೆನ್ನಟ್ಟಿದ್ದ ವೇಳೆ ಇರಡೂ ಗುಂಡಿಯೊಳಗೆ ಬಿದ್ದಿವೆ ಎನ್ನಲಾಗಿದ್ದು, ಹುಲಿ ಹಾಗೂ ನಾಯಿ ಎರಡಕ್ಕೂ ಅರವಳಿಕೆ ಮದ್ದು ನೀಡಿ ಅವನ್ನು ಶಾಂತಗೊಳಿಸಿ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

ಎರಡೂ ಪ್ರಾಣಿಗಳು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಇನ್ನು ರಕ್ಷಣೆಯ ಬಳಿಕ ಹುಲಿಯನ್ನು ಪೆರಿಯಾ‌ರ್ ಪ್ರಾಣಿಧಾಮಕ್ಕೆ ಕಳುಹಿಸಲಾಗಿದೆ.