ಡೈಲಿ ವಾರ್ತೆ: 22/ಅ./2025

ವಿಶ್ವ ಮಾಸ್ಟರ್ ಪವರ್ ಲಿಫ್ಟಿಂಗ್ – ಡಾ. ಸತೀಶ್ ಖಾರ್ವಿ ಗೆ 6ನೇ ಸ್ಥಾನ

ದಕ್ಷಿಣ ಆಫ್ರಿಕಾ ಕೇಪ್ ಟೌನ್ ನಲ್ಲಿ ಮುಕ್ತಾಯ ಕಂಡ ವಿಶ್ವ ಮಾಸ್ಟರ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್- 2025 ನಲ್ಲಿ ಮಾಸ್ಟರ್ 1 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಸ್ಕಾಟ್ 165 ಕೆಜಿ, ಬೆಂಜ್ ಪ್ರೆಸ್ 100 ಕೆಜಿ, ಡೆಡ್ ಲಿಫ್ಟ್ 222.5 ಕೆಜಿ, ಒಟ್ಟು 487. 5 ಕೆಜಿ ಭಾರವನ್ನು ಎತ್ತುವ ಮೂಲಕ ಪ್ರಬಲ ಮಾಸ್ಟರ್ ಲಿಪ್ಟರುಗಳ ನಡುವೆ ವಿಶ್ವದಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.

ಚಾಂಪಿಯನ್ಶಿಪ್ ನಲ್ಲಿ ಬ್ರೆಜಿಲ್ ಚಿನ್ನದ ಪದಕ, ಯು ಎಸ್ ಎ ಬೆಳ್ಳಿ ಪದಕ, ಸೌತ್ ಆಫ್ರಿಕಾ ಕಂಚಿನ ಸ್ಥಾನ ಪಡೆಯಲಾಯಿತು.

ಇವರು ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ ವ್ಯವಸ್ಥಾಪಕರು ಹಾಗೂ ಕಿಂಗ್ ಫಿಷಾರ್ (ರಿ) ಸ್ಪೋರ್ಟ್ಸ್ ಕ್ಲಬ್ ಖಾರ್ವಿ ಕೇರಿ ಇದರ ಅಧ್ಯಕ್ಷರಾಗಿರುತ್ತಾರೆ.