


ಡೈಲಿವಾರ್ತೆ:07/ಏಪ್ರಿಲ್ /2026

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ದಿನಾಂಕ ಫಿಕ್ಸ್: ಏಪ್ರಿಲ್ 9ಕ್ಕೆ ಹೊರಬೀಳಲಿದೆ ರಿಸಲ್ಟ್!

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಹಲವು ಗೊಂದಲಗಳ ನಡುವೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಏಪ್ರಿಲ್ 9ರಂದು (ಗುರುವಾರ) ಅಧಿಕೃತವಾಗಿ ಫಲಿತಾಂಶ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟ
ನಿಜವಾಗಿ (ಸೋಮವಾರ) ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ತಾಂತ್ರಿಕ ಅಥವಾ ಅನಿವಾರ್ಯ ಕಾರಣಗಳಿಂದಾಗಿ ಮಂಡಳಿಯು ದಿನಾಂಕವನ್ನು ದಿಢೀರ್ ಮುಂದೂಡಿತ್ತು. ಈಗ ನೀಡಿರುವ ಮಾಹಿತಿಯಂತೆ ಏಪ್ರಿಲ್ 9, ಗುರುವಾರ.
ಬೆಳಗ್ಗೆ ಶಿಕ್ಷಣ ಸಚಿವರು ನಡೆಸುವ ಸುದ್ದಿಗೋಷ್ಠಿಯ ನಂತರ ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ.
ವೆಬ್‌ಸೈಟ್ ಲಭ್ಯತೆ: ಅಂದು ಮಧ್ಯಾಹ್ನದ ನಂತರ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.
ಪರೀಕ್ಷೆಯ ಅಂಕಿ-ಅಂಶಗಳು
ಈ ಬಾರಿ ರಾಜ್ಯಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರ ವಿವರ ಹೀಗಿದೆ:
ಪರೀಕ್ಷೆ ನಡೆದ ಅವಧಿ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 7,10,363
ಪರೀಕ್ಷಾ ಕೇಂದ್ರಗಳ ಸಂಖ್ಯೆ 1,217
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಇಲಾಖೆಯ ಅಧಿಕೃತ ಜಾಲತಾಣವಾದ karresults.nic.in ಗೆ ಭೇಟಿ ನೀಡಬಹುದು.