



ಡೈಲಿವಾರ್ತೆ:23/ಏಪ್ರಿಲ್ /2026

ಅಲ್ಪಸಂಖ್ಯಾತ ಮಹಿಳೆಯರಿಗಾಗಿ ಗುಣಮಟ್ಟದ ಉಚಿತ ಶಿಕ್ಷಣ: ಕುಂದಾಪುರ ಮೈನಾರಿಟಿ ಮಹಿಳಾ ಪಿಯು ಕಾಲೇಜಿನಲ್ಲಿ 2026-27 ಪ್ರವೇಶಾತಿ ಆರಂಭ

ಕುಂದಾಪುರ: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಆಶ್ರಯದಲ್ಲಿ ಮೆಹ್ರಾಜ್ ಜುಮ್ಮಾ ಮಸ್ಜಿದ್ ಗುಲ್ವಾಡಿ ಇದರ ಅಡಿಯಲ್ಲಿ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಈ ಕಾಲೇಜು ವಿಶೇಷವಾಗಿ ಬಾಲಕಿಯರಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ PCMB, ವಾಣಿಜ್ಯ ವಿಭಾಗದಲ್ಲಿ CEBA ಹಾಗೂ ಕಲಾ ವಿಭಾಗದಲ್ಲಿ HEPS ಕೋರ್ಸ್‌ಗಳು ಲಭ್ಯವಿವೆ. ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣವನ್ನು ‘ಉಚಿತವಾಗಿ‘ ನೀಡಲಾಗುತ್ತಿದ್ದು, ಪಠ್ಯಪುಸ್ತಕಗಳು, ನೋಟುಪುಸ್ತಕಗಳು ಹಾಗೂ ಇತರೆ ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಜೊತೆಗೆ CET, NEET ಹಾಗೂ JEE ತರಬೇತಿಯನ್ನು ಸಹ ಉಚಿತವಾಗಿ ನೀಡಲಾಗುತ್ತದೆ.
ಅನುಭವಸಂಪನ್ನ ಹಾಗೂ ಪರಿಣತಿ ಹೊಂದಿದ ಶಿಕ್ಷಕ ವೃಂದ ಈ ಸಂಸ್ಥೆಯ ಪ್ರಮುಖ ಆಕರ್ಷಣೆಯಾಗಿದ್ದು, ವಿದ್ಯಾರ್ಥಿನಿಯರ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.
ಪ್ರವೇಶ ಅರ್ಹತೆ: ಒಟ್ಟು ಸೀಟುಗಳಲ್ಲಿ 75 ಶೇಕಡಾ ಸ್ಥಾನಗಳನ್ನು ಅಲ್ಪಸಂಖ್ಯಾತ ಸಮುದಾಯಗಳಿಗೆ (ಮುಸ್ಲಿಂ, ಕ್ರೈಸ್ತ, ಜೈನ, ಸಿಖ್, ಬೌದ್ಧ ಮತ್ತು ಪಾರ್ಸಿ) ಮೀಸಲಿರಿಸಲಾಗಿದ್ದು, ಉಳಿದ 25 ಶೇಕಡಾ ಸ್ಥಾನಗಳು ಓಬಿಸಿ, ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ಮೀಸಲಾಗಿವೆ. ವಿದ್ಯಾರ್ಥಿನಿಯ ಪೋಷಕರ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು.
ಕಾಲೇಜ್ ವಿಳಾಸ: ಕಾಲೇಜು ಕುಂದಾಪುರದ ತಲ್ಲೂರು ಪ್ರದೇಶದಲ್ಲಿ, ಸೇಂಟ್ ಫ್ರಾನ್ಸಿಸ್ ಅಸ್ಸಿಸಿ ಚರ್ಚ್ ಕಟ್ಟಡದ ಎದುರುಭಾಗದಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ: 8762388543ಪ್ರಾಂಶುಪಾಲರು: 8762434245ಜಿಲ್ಲಾ ಕಚೇರಿ (ಉಡುಪಿ): 0820-2574990ತಾಲ್ಲೂಕು ವಿಸ್ತರಣಾಧಿಕಾರಿ ಕಚೇರಿ: 08254-230370 (ಕುಂದಾಪುರ), 08258-231101 (ಕಾರ್ಕಳ).ಅಲ್ಪಸಂಖ್ಯಾತ ಸಮುದಾಯದ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.