



ಡೈಲಿವಾರ್ತೆ:23/ಏಪ್ರಿಲ್ /2026

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೆಲ್ಕಾರ್ ಎಸ್‌ಎಂಆರ್ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

ಬಂಟ್ವಾಳ: 2026 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಸ್. ಎಂ. ಆರ್ ಪಬ್ಲಿಕ್ ಶಾಲೆ ಶೇಕಡಾ 99 ಫಲಿತಾಂಶ ಪಡೆದಿದೆ. 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದರೆ 17ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.





ಶಾಲೆಯ ಟಾಪರ್ ರಿಫಾ ಸುಲ್ತಾನಾ 625 ರಲ್ಲಿ 608 ಅಂಕಗಳನ್ನು ಗಳಿಸಿ, ಶೇಕಡಾ 97.28 ಗಳಿಸಿದ್ದಾರೆ. ಉಳಿದಂತೆ ಫಾರಿಶಾ (562), ಮುಹಮ್ಮದ್ ಸಜ್ಜಾದ್ (555), ಫಾತಿಮಾ ಅಸ್ನಾ (547), ಖತೀಜಾ ಹಿಂಸಾ (535) ಉತ್ತಮ ಸಾಧನೆ ಮಾಡಿದ್ದಾರೆ.