



ಡೈಲಿವಾರ್ತೆ:23/ಏಪ್ರಿಲ್ /2026

ಮಾಣಿ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಿ ಎ ಭಾರಧ್ವಜ್ ಬಂಟ್ವಾಳ ತಾಲೂಕಿಗೆ ಪ್ರಥಮ ರ್‍ಯಾಂಕ್ , ರಾಜ್ಯಕ್ಕೆ 6 ನೇ ರ್‍ಯಾಂಕ್

ಬಂಟ್ವಾಳ : 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮಾಣಿ ಪೆರಾಜೆಯ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.
625 ರಲ್ಲಿ 620 ಅಂಕಗಳನ್ನು ಪಡೆದ ಇಲ್ಲಿನ ವಿದ್ಯಾರ್ಥಿ ಪೂರ್ವಿ ಎ.ಭಾರಧ್ವಜ್ ಬಂಟ್ವಾಳ ತಾಲೂಕಿಗೆ ಪ್ರಥಮ ರ್‍ಯಾಂಕ್ ಹಾಗೂ ರಾಜ್ಯಕ್ಕೆ 6 ನೇ ರ್‍ಯಾಂಕ್ ದಾಖಲೆ ಮಾಡಿರುತ್ತಾನೆ. ಒಟ್ಟು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯಲ್ಲಿ ಪೂರ್ವಿ ಎ ಭಾರಧ್ವಜ್ (620) ಪ್ರಥಮ ಸ್ಥಾನ, ಸಂಜನಾ ಎಸ್ ಭಟ್ (614) ದ್ವಿತೀಯ ಸ್ಥಾನ ಹಾಗೂ ಅಂಶಿಕ ಎಸ್ ಕೆ (613) ತೃತೀಯ ಸ್ಥಾನವನ್ನು ಪಡೆದು ಕೊಂಡಿರುತ್ತಾರೆ.