



ಡೈಲಿವಾರ್ತೆ:23/ಏಪ್ರಿಲ್ /2026


ಎಸ್ಸೆಸ್ಸೆಲ್ಸಿ ಫಲಿತಾಂಶ : ಸುದಾನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಫಾತಿಮಾ ಶಝಾಗೆ ಶೇಕಡಾ 98 ಅಂಕಗಳು

ಬಂಟ್ವಾಳ : ಪುತ್ತೂರು ಸುದಾನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಫಾತಿಮಾ ಶಝಾ ಅವರು 612 ಅಂಕಗಳನ್ನು ಪಡೆಯುವ ಮೂಲಕ 97.92 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.
ಈಕೆ ಇಂಗ್ಲಿಷ್ ನಲ್ಲಿ 122, ಕನ್ನಡದಲ್ಲಿ 100 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದಿದ್ದಾಳೆ. ಈಕೆ ಅಳಕೆಮಜಲು ನಿವಾಸಿ ಉಮ್ಮರ್ ಹಾಗೂ ಮುಮ್ತಾಝ್ ದಂಪತಿಯ ಪುತ್ರಿ .