



ಡೈಲಿವಾರ್ತೆ:23/ಏಪ್ರಿಲ್ /2026

ಬುರೂಜ್ ಶಾಲೆಗೆ ಶೇಕಡಾ 100 ಫಲಿತಾಂಶ

ಬಂಟ್ವಾಳ: 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲಾಬಾಗಿಲು – ರಝಾನಗರದ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 3 ಎಕ್ಸಲೆಂಟ್, 5 ಡಿಸ್ಟಿಂಕ್ಷನ್ ,21 ಪ್ರಥಮ, 5 ದ್ವಿತೀಯ ಸ್ಥಾನದಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕಿಶ್ಪಾಝಬೀನ್ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಮಶ್ಕೂರ ಹನಾ ದ್ವಿತೀಯ ಹಾಗೂ ಅಯಾನ್ ಶೇಖ್ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಹನ್ಹಾ ಆಯಿಷ ಹಿಂದಿಯಲ್ಲಿ ನೂರಕ್ಕೆ ನೂರು ಅಂಕ ಪಡೆದರೆ ಮಶ್ಕೂರ ಹನಾ ಕನ್ನಡದಲ್ಲಿ 125 ಕ್ಕೆ 124 ಅಂಕವನ್ನು ಪಡೆದಿರುತ್ತಾರೆ.