ಡೈಲಿವಾರ್ತೆ:24/ಏಪ್ರಿಲ್ /2026

ತೌಹೀದ್ ಎಜುಕೇಶನಲ್ ಟ್ರಸ್ಟ್ (ರಿ.), ಗಂಗೊಳ್ಳಿ ಅಧೀನದ ಶಾಲೆಗಳ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ

ಗಂಗೊಳ್ಳಿ: ಗಂಗೊಳ್ಳಿಯ ತೌಹೀದ್ ಎಜುಕೇಶನಲ್ ಟ್ರಸ್ಟ್ (ರಿ.) ಆಡಳಿತದಲ್ಲಿರುವ ತೌಹೀದ್ ಇಂಗ್ಲಿಷ್ ಮೀಡಿಯಂ ಶಾಲೆ, ಗಂಗೊಳ್ಳಿ ಮತ್ತು ತೌಹೀದ್ ಪಬ್ಲಿಕ್ ಶಾಲೆ, ಶಿರೂರು ಇವುಗಳ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿನ ಸಾಧನೆ ಈ ಕೆಳಗಿನಂತಿದೆ.

ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಗಂಗೊಳ್ಳಿ

ಪರೀಕ್ಷೆಗೆ ಹಾಜರಾದ 56 ವಿದ್ಯಾರ್ಥಿಗಳಲ್ಲಿ 54 ಮಂದಿ ಉತ್ತೀರ್ಣರಾಗಿದ್ದಾರೆ. ಇದರಿಂದ ಶೇ. 96.4 ಫಲಿತಾಂಶ ಬಂದಿದೆ. ಇವರಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಸಾನಿಯಾ ಮಾಲಿ 595 ಅಂಕ (95.2%) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಜಿಕ್ರಾ 587 ಅಂಕ (93.92%) ಪಡೆದು ದ್ವಿತೀಯ ಸ್ಥಾನ ಪಡೆದಿದ್ದು, ಅಬ್ದುಲ್ ಬಾರಿ ಎ ಮತ್ತು ಜಿಕ್ರಾ ಖಾನ್ ತಲಾ 584 ಅಂಕ (93.44%) ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.

ತೌಹೀದ್ ಪಬ್ಲಿಕ್ ಶಾಲೆ ಶಿರೂರು

ಪರೀಕ್ಷೆಗೆ 50 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ದಾಖಲಿಸಲಾಗಿದೆ. ಇವರಲ್ಲಿ 5 ಮಂದಿ ವಿಶಿಷ್ಟ ಶ್ರೇಣಿ ಹಾಗೂ 37 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಯುಸ್ರಾ ಅಂಜುಂ 582 ಅಂಕ (93.12%) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ನುಮೈರಾ ಶಾಝ್ 567 ಅಂಕ (90.72%) ಪಡೆದು ದ್ವಿತೀಯ ಸ್ಥಾನ ಪಡೆದಿದ್ದು, ಖರುರಿ ಮುತಿಯಾ ಇಶ್ರತ್ 559 ಅಂಕ (89.44%) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಟ್ರಸ್ಟ್ ಆಡಳಿತ ಮಂಡಳಿ ತಿಳಿಸಿದೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.