


ಡೈಲಿವಾರ್ತೆ: 10/ಜು./2026


ಮೀಟರ್ ಬಡ್ಡಿ ಕಿರುಕುಳ: ಆಟೋ ಚಾಲಕ ವಿಷ ಕುಡಿದು ಆತ್ಮಹತ್ಯೆ!

ಬೆಂಗಳೂರು: ಆಟೋ ಚಾಲಕನೋರ್ವ ಮೀಟರ್ ಬಡ್ಡಿ ಕಿರುಕುಳ ಮತ್ತು ಸಾಲದ ಬಾಧೆಯಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜುಲೈ 10 ರಂದು ಶುಕ್ರವಾರ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ ಜೀ ಯೌಸುಫ್ ಜಮಾಲ್‌ದ್ದಿನ್ ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೂ ಮುನ್ನ ಯೌಸುಫ್ ಜಮಾಲ್‌ದ್ದಿನ್ ವಿಷ ಕುಡಿಯುವ ವಿಡಿಯೋ ಮಾಡಿ ತಮ್ಮ ಸ್ನೇಹಿತರಿಗೆ ಕಳುಹಿಸಿದ್ದಾನೆ. ವಿಡಿಯೋದಲ್ಲಿ ತಾನು ಮಾಡಿಕೊಂಡಿದ್ದ ಸಾಲದ ಬಗ್ಗೆ ಹಾಗೂ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದವರ ಬಗ್ಗೆ ಉಲ್ಲೇಖಿಸಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.