


ಡೈಲಿವಾರ್ತೆ: 12/ಜು./2026


ರಿಷಿರಾಜ್ ಸಾಸ್ತಾನ ಕೊಡಮಾಡಿದ “ಹಸಿರು ರಥ” ಪಂಚವರ್ಣಕ್ಕೆ ಹಸ್ತಾಂತರ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಪರಿಸರ ಕಾಳಜಿ ಕಾರ್ಯಕ್ರಮಕ್ಕೆ ಹಸಿರು ರಥವನ್ನು ಸಾಮಾಜಿಕ ಮುಖಂಡ ರಿಷಿರಾಜ್ ಸಾಸ್ತಾನ ತಾಯಿ ರತ್ನಾ ಜೆ ರಾಜ್ ಮೂಲಕ ಕೊಡುಗೆಯಾಗಿ ನೀಡಿದ್ದು ಇದನ್ನು ಶನಿವಾರ ಕೀ ಅನ್ನು ಪಂಚವರ್ಣ ಸಂಘಟನೆ ಗೌರವ ಸಲಹೆಗಾರ ಆನಂದ್ ಸಿ ಕುಂದರ್ ರವರಿಗೆ ಹಸ್ತಾಂತರಿಸುವ ಮೂಲಕ ಸಂಘಟನೆಗೆ ಬಲ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಿಷಿರಾಜ್ ಸಾಸ್ತಾನ ಪರಿಸರಕ್ಕಾಗಿ ತಮ್ಮನ್ನು ಸಮರ್ಪಣಾ ಮನೋಭಾವದಿಂದ ಸಮರ್ಪಿಸಿಕೊಂಡ ಪಂಚವರ್ಣ ಸಂಘಟನೆ ಪ್ರಕೃತಿ ಪ್ರೇಮದ ಕಾಳಜಿ ಎಲ್ಲಾ ಕೊಡುಗೆಗಿಂತ ಮಿಗಿಲಾದದ್ದು ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲು ನಮ್ಮೆಲ್ಲರ ಸಹಕಾರ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ನರೇಂದ್ರ ಕುಮಾರ್ ಕೋಟ,ಸ್ನೇಹಕೂಟದ ವಿಜಯಲಕ್ಷ್ಮೀ ಭಟ್, ಪಂಚವರ್ಣ ಸಂಘಟನೆ ಪ್ರಮುಖರಾದ ಶೇವಧಿ ಸುರೇಶ್ ಗಾಣಿಗ, ಮನೋಹರ್ ಪೂಜಾರಿ, ಲಲಿತಾ ಪೂಜಾರಿ, ಸಂಚಾಲಕ ಅಮೃತ್ ಜೋಗಿ, ಅಜಿತ್ ಆಚಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.