


ಡೈಲಿವಾರ್ತೆ: 12/ಜು./2026


ಪಂಚವರ್ಣ ಸಂಘಟನೆಯ ಹಸಿರು ಹೆಜ್ಜೆಗೆ ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ, ಗೆಳೆಯರ ಬಳಗ ಸಂಯೋಜನೆ:
ಮಕ್ಕಳಲ್ಲಿ ಪರಿಸರ ಜಾಗೃತಿ ಶ್ಲಾಘನೀಯ- ರಾಜೇಶ್ ಗಾಣಿಗ ಅಚ್ಲಾಡಿ

ಕೋಟ: ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಮುಂದಿನ ತಲೆಮಾರಿಗೆ ನೈಜ ಪರಿಸರಪ್ರೇಮ ಬಿತ್ತುವ ಪಂಚವರ್ಣದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಹೇಳಿದರು.

ಕಾರ್ಕಡ ಪರಿಸರದಲ್ಲಿ ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ೩೦೯ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಗೀತಾನಂದ ಫೌಂಡೇಶನ್ ಮಣೂರು,ಅನ್ನಪೂರ್ಣ ನರ್ಸರಿ ಪೇತ್ರಿ ಇವರ ಸಹಯೋಗದೊಂದಿಗೆ ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ,ಗೆಳೆಯರ ಬಳಗ ಕಾರ್ಕಡ ಇವರ ಸಂಯೋಜನೆಯೊಂದಿಗೆ ಹಸಿರು ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳ ಪಾತ್ರ ಬಹುಮುಖ್ಯವಾದದ್ದು ಪರಿಸರ ಇದ್ದರೆ ಮನುಕುಲ ಉಳಿದಿತು ಎಂಬ ಧ್ಯೇಯವನ್ನಿರಿಸಿ ಜಾಗೃತಿ ಮೂಡಿಸುವ ಕಾರ್ಯ ಎಲ್ಲೆಡೆ ನಡೆಯಲಿ ಎಂದರು.

ಮನೆ ಮನೆಗೆ ಪಾರಿಜಾತ,ಲಕ್ಷ÷್ಮಣಫಲ ಅಭಿಯಾನಕ್ಕೆ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಗಿಡ ನಡುವ ಮೂಲಕ ಚಾಲನೆ ನೀಡಿದರು.
ಪಂಚವರ್ಣದ ಮಹೇಶ್ ಬೆಳಗಾವಿ ಹಸಿರು ಹೆಜ್ಜೆಯ ಪ್ರತಿಜ್ಞಾ ವಿಧಿ ಭೋದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೊಲ್ಲೂರು ದೇಗುಲದ ಮಾಜಿ ಟ್ರಸ್ಟಿ ಕೆ.ಪಿ ಶೇಖರ್,
ನ್ಯೂ ಕಾರ್ಕಡ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಇಂಡಿಕಾ ಕಲಾಬಳಗದ ಪ್ರಭಾಕರ್ ಮಣೂರು,ಕಾರ್ಕಡ ಗೆಳೆಯರ ಬಳಗದ ನಾಗರಾಜ್ ಉಪಾಧ್ಯಾ,ಶ್ರೀಕಾಂತ್ ಐತಾಳ್,ತಮ್ಮಯ್ಯ,ಶಶಿಧರ ಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿದರು.ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ವಂದಿಸಿದರು.