ಡೈಲಿ ವಾರ್ತೆ : 01 ಮೇ 2022

ಬೈಂದೂರು : ಪ್ರಥಮ ಪಿಯುಸಿ ಫಲಿತಾಂಶದ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರಿನ ತಗ್ಗರ್ಸೆ ಎಂಬಲ್ಲಿ ಸಂಭವಿಸಿದೆ. ತಗ್ಗರ್ಸೆ ಗ್ರಾಮದ ಶೋಭಾ ಶೇರುಗಾರರ ಬಾಡಿಗೆ ಮನೆ ನಿವಾಸಿ ಬೇಬಿ ಶೆಡ್ತಿ ಎಂಬವರ ಮಗ ಸುದೀಪ್(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಸುದೀಪ್, ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದರು. ಫಲಿತಾಂಶದಲ್ಲಿ ತಾನು ಅನುತ್ತೀರ್ಣಗೊಳ್ಳಬಹುದು ಎಂಬ ಹೆದರಿಕೆಯಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಅಡುಗೆ ಕೋಣೆಯ ಮೇಲ್ಯಾವಣಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.