ಡೈಲಿ ವಾರ್ತೆ : 01 ಮೇ 2022

ಉತ್ತರ ಪ್ರದೇಶ : 13 ವರ್ಷದ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಈ ಘಟನೆ ನಡೆದಿದೆ.ಅಂಗಡಿಯಲ್ಲಿ ವಸ್ತುಗಳ ಕೊಳ್ಳಲೆಂದು ತೆರಳಿದ್ದ ಬಾಲಕಿಯನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು.

ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಪೊಲೀಸರು ಇಬ್ಬರು ಸಹೋದರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ 13 ವರ್ಷದ ಮಗಳು ಸಾಮಾನು ಪಡೆಯಲು ಅಂಗಡಿಗೆ ಹೋಗಿದ್ದಳು ಎಂದು ಪುರ್ದಿಲ್‌ನಗರ ಪಟ್ಟಣದ ನಿವಾಸಿ ಸಂತ್ರಸ್ತೆಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ. ಅದೇ ಸಮಯದಲ್ಲಿ, ಯುವಕ ಆಮಿಷ ಒಡ್ಡಿ ತನ್ನ ಮನೆಗೆ ಕರೆದೊಯ್ದ.ಅಲ್ಲಿ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಬಾಲಕಿ ಮನೆಗೆ ಬಂದಿ ನಡೆದ ವಿಚಾರ ತಿಳಿಸಿದ್ದಾಳೆ.

ಆರೋಪಿಗಳನ್ನು ಪರ್ದಿಲ್‌ನಗರ ನಿವಾಸಿ ಜಸ್ವಂತ್ ಅಲಿಯಾಸ್ ಛೋಟು ಮತ್ತು ಸೌರಭ್ ಅವರ ಪುತ್ರ ಕೃಷ್ಣಕಾಂತ್ ಎಂದು ಹೆಸರಿಸಲಾಗಿದೆ. ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.