ಡೈಲಿ ವಾರ್ತೆ : 02 ಮೇ 2022



ಕೋಟ : ಉಡುಪಿ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಚಂದ್ರದರ್ಶನವಾಗಿರುವ ಹಿನ್ನಲೆಯಲ್ಲಿ ಕೋಟದಲ್ಲಿ ಸಂಭ್ರಮ, ಸಡಗರದ ಈದುಲ್ ಫಿತ್ರ್ ಆಚರಿಸಲಾಯಿತು.

ಕೋಟ ಜಾಮಿಯಾ ಮಸೀದಿಯಲ್ಲಿ ಇಂದು ಬೆಳಿಗ್ಗೆ ಖತಿಬರಾದ ಮೌಲಾನಾ ಮೊಮೀನೇ ಅಶ್ರಫ್ ಅವರ ನೇತೃತ್ವದಲ್ಲಿ ಹಬ್ಬದ ವಿಶೇಷ ಸಾಮೂಹಿಕ ನಮಾಜ್ ಹಾಗೂ ಧರ್ಮೋಪದೇಶ ನಡೆಯಿತು.

ಮಸೀದಿಯ ಅಧ್ಯಕ್ಷರಾದ ಸಲೀಮ್ ಸಾಹೇಬ್ ಎಲ್ಲರನ್ನು ಸ್ವಾಗತಿಸಿ ಈದ್ ಶುಭಾಶಯಗಳನ್ನು ಹೇಳಿದರು.