ಡೈಲಿ ವಾರ್ತೆ : 04 ಮೇ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ತಾಳಗುಪ್ಪ: ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೆಣ್ಣೆ ಬಳಿಯ ಶರಾವತಿ ಹಿನ್ನೀರು ಭಾಗದಲ್ಲಿ ಲಕ್ಷಾಂತರ ಮೀನುಗಳು ಸತತವಾಗಿ ಒಂದು ವಾರದಿಂದ ಸಾಯುತ್ತಿದ್ದೂ, ಸತ್ತ ಮೀನುಗಳು ನೀರಿನಲ್ಲಿ ತೇಲುತ್ತಿದ್ದೂ ಅಲ್ಲದೇ ಅಲೆಯ ಹೊಡೆತಕ್ಕೆ ಸಾಕಷ್ಟು ಮೀನುಗಳು ದಡದಲ್ಲಿ ಬಿದ್ದಿರುತ್ತದೆ.



ಸ್ಥಳೀಯರ ಮಾಹಿತಿಯಂತೆ ” ಕೋಡಸ ” ಜಾತಿಗೆ ಸೇರಿದ ಮೀನಿನ ಸಂತತಿಯಾಗಿದ್ದೂ, ಬಾಲದ ಬದಿಯಲ್ಲಿ ಕೆಂಪು ಆಕಾರದಲ್ಲಿದ್ದು, ಮೀನಿನ ಮೈಯ ಮೇಲೆ ಕಪ್ಪು ಮಿಶ್ರಿತ ಕೆಂಪು ಬಣ್ಣದ ಗುರುತುಗಳು ಪತ್ತೆಯಾಗಿದೆ.



ಕೂಡಲೇ ಶಿವಮೊಗ್ಗ ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಈ ಮೀನಿನ ಮಾರಣಹೋಮಕ್ಕೆ ಕಾರಣ ಹಾಗೂ ಬದುಕುಳಿದ ಮೀನಿನ ಸಂತತಿಗೆ ಸೂಕ್ತ ರಕ್ಷಣೆ ನೀಡುವಂತೆ ಸ್ಥಳೀಯರು, ಪರಿಸರವಾದಿಗಳು ಆಗ್ರಹಿಸಿದ್ದಾರೆ.