




ಡೈಲಿವಾರ್ತೆ:13/ಅ./2026

ಶ್ರೀ ಕ್ಷೇತ್ರ ಕಳಿಬೈಲ್‌ನಲ್ಲಿ ಶರನ್ನವರಾತ್ರಿ ವೈಭವ; ಭಜನಾಮೃತ ಕಾರ್ಯಕ್ರಮಕ್ಕೆ ಸುಗ್ಗಿ ಸುಧಾಕರ್ ಶೆಟ್ಟಿಯವರಿಂದ ಚಾಲನೆ

ಸಾಸ್ತಾನ: ಶ್ರೀ ಕ್ಷೇತ್ರ ಕಳಿಬೈಲ್‌ನಲ್ಲಿ ನಡೆಯುತ್ತಿರುವ ಮಹಾ ಶರನ್ನವರಾತ್ರಿ ಮಹೋತ್ಸವದ ಎರಡನೇ ದಿನದ ಭಜನಾಮೃತ ಕಾರ್ಯಕ್ರಮವನ್ನು ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ ಉದ್ಘಾಟಿಸಿದರು.
ಅವರು ಮಾತನಾಡಿ ಭಜನೆಯು ಮನಸ್ಸಿಗೆ ಶಾಂತಿ ನೀಡುವುದರ ಜತೆಗೆ ಭಕ್ತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವ ಪ್ರಮುಖ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಚಂದ್ರಶೇಖರ ಬೀಜಾಡಿ, ಶಿಕ್ಷಕಿ ಪುಷ್ಪಲತಾ ಉಡುಪಿ, ಕಕ್ಕುಂಜೆಯ ಉದ್ಯಮಿ ಶ್ರೀನಿವಾಸ್ ಶೆಟ್ಟಿ, ಉಡುಪಿಯ ಉದ್ಯಮಿ ಆಲ್ವಿನ್ ಆಂಟನಿ, ಧರ್ಮೇಂದ್ರ ಕುಮಾರ್ ಕುಂದಾಪುರ ಹಾಗೂ ಕೃಷ್ಣ ಬಂಗೇರ ಉಪಸ್ಥಿತರಿದ್ದು, ಧಾರ್ಮಿಕ ಆಚರಣೆಗಳು ಮತ್ತು ಭಜನಾ ಕಾರ್ಯಕ್ರಮಗಳ ಮಹತ್ವವನ್ನು ಮೆಚ್ಚಿದರು.
ಈ ಸಂದರ್ಭದಲ್ಲಿ ಮಣ್ಣಿನ ಮೂರ್ತಿಗಳನ್ನು ರಚಿಸುವ ಮೂಲಕ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ರಹ್ಮಾವರದ ಶಿವರಾಜ್ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇಗುಲದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಪೂಜಾರಿ, ದೇಗುಲದ ಪ್ರಧಾನಾರ್ಚಕ ಅಭಿಜಿತ್ ಪಾಂಡೇಶ್ವರ ಉಪಸ್ಥಿತರಿದ್ದರು.
ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.