ಡೈಲಿವಾರ್ತೆ:12/ಅ./2026

ಪಾಂಡೇಶ್ವರ ಕಳಿಬೈಲು ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ: ಕಳಿಬೈಲು ಕ್ಷೇತ್ರ ಭಕ್ತರ ಸಂಕಷ್ಟ ನಿವಾರಕ ಪವಿತ್ರ ಕ್ಷೇತ್ರ- ಐರೋಡಿ ವಿಠ್ಠಲ್ ಪೂಜಾರಿ

ಕೋಟ: ಧಾರ್ಮಿಕವಾಗಿ ಕಳಿಬೈಲು ಕ್ಷೇತ್ರ ಭಕ್ತಸಮುದಾಯದ ಸಂಕಷ್ಟ ನಿವಾರಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ ಹೇಳಿದರು.

ಭಾನುವಾರ ಇಲ್ಲಿನ ಸಾಸ್ತಾನದ ಪಾಂಡೇಶ್ವರ ಶ್ರೀ ಕ್ಷೇತ್ರ ಕಳಿಬೈಲು ತುಳಿಸಿ ಅಮ್ಮ ಪರಿವಾರ, ಕೊರಗಜ್ಜ ಸಾನಿಧ್ಯ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಹಸಿರು ಕಳಿಬೈಲು ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ ಹಲವಾರು ಪವಾಡಗಳಿಗೆ ಸಾಕ್ಷಿಯಾದ ಈ ಕ್ಷೇತ್ರದಲ್ಲಿ ಸಾಮಾಜಿಕ ಪರಿವರ್ತನಾ ಕಾರ್ಯಕ್ರಮಗಳು ಸಮಾಜಮುಖಿ ಚಿಂತನೆಗಳು ಪಸರಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಇರ್ವರು ಸಾಧಕರಾದ ಸುನೀಲ್ ಪಾಂಡೇಶ್ವರ, ಶ್ರೀಶ ಆಚಾರ್ ಇವರುಗಳಿಗೆ ಹಸಿರು ಕಳಿಬೈಲು ಪುರಸ್ಕಾರ ನೀಡಿ ಗೌರವಿಸಲಾಯಿತು.
ದೇಗುಲದ ಪಾತ್ರಿ ನವೀನ್ ಕುಂಜಿಬೆಟ್ಟು ಹಸಿರು ಪುರಸ್ಕಾರ ನೀಡಿ ಗೌರವಿಸಿದರು.
ಸಭಾಧ್ಯಕ್ಷತೆಯನ್ನು ದೇಗುಲದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಪೂಜಾರಿ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ದೈವಾರಾಧಕರ ಒಕ್ಕೂಟದ ಅಧ್ಯಕ್ಷ ವಿನೋದ ಶೆಟ್ಟಿ ಭಾಗವಹಿಸಿ ಶುಭಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಪತ್ರಕರ್ತ ರವೀಂದ್ರ ಕೋಟ,ಉಷಾ ಪೂಜಾರಿ ಮಟಪಾಡಿ,ಪ್ರೀತಿ ಪೂಜಾರಿ,ದಿನಕರ ಪಾಂಡೇಶ್ವರ ಉಪಸ್ಥಿತರಿದ್ದರು.

ದೇಗುಲದ ಪ್ರಧಾನಾರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಪ್ರಣುತ್ ಗಾಣಿಗ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು.