




ಡೈಲಿವಾರ್ತೆ:18/ಅ./2026

ಅ.19 ರಂದು ಮಿತ್ತೂರು ಕೆಜಿಎನ್ ನಲ್ಲಿ ವಾರ್ಷಿಕ ಕಲಾ ಹಬ್ಬ ಫಿದಾಕ್ ಇಜಿನ್ ಗೆ ಚಾಲನೆ

ಬಂಟ್ವಾಳ : ಮಿತ್ತೂರು ದಾರುಲ್ ಇರ್ಶಾದ್ ಅಧೀನದ ವಿದ್ಯಾರ್ಥಿ ಸಂಘಟನೆ ಮುಹೀನುಸ್ಸುನ್ನಹ್
ವತಿಯಿಂದ ನಡೆಸಲ್ಪಡುವ ಮೂರು ದಿನದ ವಾರ್ಷಿಕ ಕಲಾ ಹಬ್ಬ ಫಿದಾಕ್ ಇಜೆನ್ ಇದರ ಉದ್ಘಾಟನಾ ಸಮಾರಂಭ ಸೋಮವಾರ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ನಡೆಯಲಿರುವುದು.
ಕರ್ನಾಟಕ ಜಂಇಯ್ಯತ್ತುಲ್ ಉಲಮಾದ ರಾಜ್ಯಾಧ್ಯಕ್ಷ, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರು ಚಾಲನೆ ನೀಡಲಿದ್ದು, ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಸಂಸ್ಥೆಯ ಸಿಇಒ ಇಬ್ರಾಹಿ ಫೈಝಿ ಪುಳಿಕ್ಕೂರು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.