ಡೈಲಿ ವಾರ್ತೆ : 23 ಮೇ 2022

ಸೌದಿ ಅರೇಬಿಯ : ಜಿದ್ದಾ ಎ.ಎಲ್.ಎಸ್. ಕ್ಲಾಸಿಕ್ ಪುತ್ತೂರು ಇದರ ಆಶ್ರಯದಲ್ಲಿ ತುಳುನಾಡು ಪ್ರೀಮಿಯರ್ ಲೀಗ್ ಎರಡನೇ ಸೀಸನ್ ‘ಸಿಕ್ಸ್ ಡಾಟ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟವು ಸೌದಿ ಅರೇಬಿಯಾದ ಜಿದ್ದಾದಲ್ಲಿ ಉದ್ಘಾಟನೆಗೊಂಡಿತು.



ಪಂದ್ಯಾಟವನ್ನು ಸಿಕ್ಸ್ ಡಾಟ್ಸ್ ಟ್ರೋಫಿ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅಥಿತಿಗಳಾಗಿ ಗ್ರೇಲೈನ್ ಕಾಂಟ್ರಾಕ್ಟಿಂಗ್ ಕಂಪೆನಿ ಮಾಲಕ ಝೈನುದ್ದೀನ್ ಮುನ್ನೂರು, ಅಬ್ದುಲ್ ಸಲೀಂ ಘಣಿ, ಇರ್ಶಾದ್ ಸಿಕ್ಸ್ ಡಾಟ್ಸ್, ರಯೀಸ್ ಅಹ್ಮದ್, ಬಾಬು ಸತ್ತಾರ್, ಕ್ಲಾಸಿಕ್ ಪುತ್ತೂರು ತಂಡದ ಮಾಲಕ ಹುರೈಸ್ ಬಪ್ಪಳಿಗೆ, ಎ.ಎಲ್.ಎಸ್ ಮ್ಯಾನೇಜರ್ ಇಫ್ರಾಝ್ ಮೊದಲಾದವರು ಭಾಗವಹಿಸಿದ್ದರು.



ಪ್ರಥಮ ಸೀಸನ್ ಭರ್ಜರಿ ಯಶಸ್ಸಿನಿಂದ ಪ್ರೇರಿತಗೊಂಡು ಆಯೋಜಿಸಿರುವ ದ್ವಿತೀಯ ಸೀಸನ್ ಸಿಕ್ಸ್ ಡಾಟ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟದಲ್ಲಿ ಶಾಹುಲ್ ಹಮೀದ್ ಮಾಲಕತ್ವದ ಈಸ್ಸಾ ಇಲೆವೆನ್ ಉಡುಪಿ, ಜೇಸನ್ ಡಿಕೋಸ್ಟಾ ಮಾಲಕತ್ವದ ಕುಡ್ಲ ಬುಲ್ಸ್, ಖಲಂದರ್ ಮಾಲಕತ್ವದ ದೋಸ್ತ್ ಕ್ರಿಕೆಟರ್ಸ್ ಕಂಚಿನಡ್ಕ ಮತ್ತು ಸರ್ಫರಾಝ್ ಮಾಲಕತ್ವದ ನೈಟ್ ರೈಡರ್ಸ್ ಕಂಬಾಡ್ ತಂಡಗಳು ಭಾಗವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.