ಡೈಲಿ ವಾರ್ತೆ : 01 ಜೂನ್ 2022

ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದ ಪ್ರಕೃುತಿ ಪರಸಪ್ಪ ನ್ಯಾಮೇಗೌಡ -“ಇಂಡಿಯನ್ ಬುಕ್ ಆಫ್ ರೆಕಾರ್ಡ್ -೨೦೨೨” ಗೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾಳೆ. ಆಕೆ ಇನ್ನೂ ಎಳೆಯ ವಯಸ್ಸಿನ ಹುಡುಗಿ .ಹಲವಾರು ಕನಸುಗಳನ್ನು ಹೊತ್ತು ಬದುಕಿನ ಪುಟ ತೆರೆದುಕೊಳ್ಳುವ ಮುಗ್ಧ ಬಾಲಕಿ ..!ಶಾಲೆ -ತರಗತಿ- ಅಪ್ಪ- ಅಮ್ಮ ಇವಳ ಪ್ರಪಂಚ.ಆದರೆ ಇವಳ ವಯಸ್ಸಿಗಿಂತ ಸಾಧನೆ ಹೆಚ್ಚು ಎಂದು  ಬದುಕಿನ ಕ್ಷಣವನ್ನು ಕಾತರದಿಂದ ಕಾಯುತ್ತಿರುವ  ಪುಟ್ಟ ಪೋರಿ.ಹೌದು ಸ್ನೇಹಿತರೆ, ಇಂದು ನಿಮ್ಮ ಮುಂದೆ ಹೇಳಲು ಹೊರಟಿರುವ ವಿಚಾರ ಪುಟ್ಟ ಬಾಲಕಿಯ ಮಹತ್ತರ ಸಾಧನೆ ಕುರಿತಂತೆ….!ಆಕೆ ಪ್ರಕೃುತಿ.ಮುದ್ದು ಮುಖದ ಸುಂದರ ಹುಡುಗಿ.ಈಗಿನ್ನೂ ಯುಕೆಜಿ ತರಗತಿ ಮುಗಿಸಿ, ಒಂದನೇ ತರಗತಿಗೆ ಪಾದಾರ್ಪಣ ಮಾಡಿದ್ದಾಳೆ.ಆಕೆ 5 ವರುಷ ಪ್ರಾಯದ ಪ್ರಕೃುತಿ ಸಮಾಜವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿದ ಸಾಧಕರ ಪಟ್ಟಿಗೆ ಸೇರಿ ಬಿಟ್ಟಿದಾಳೆ. ಪ್ರಸ್ತುತ ಬೆಂಗಳೂರಿನ ಗಿರಿ ನಗರದ ಸೇಂಟ್ ಪಾಲ್ಸ್ ಇಂಗ್ಲಿಷ್ ಮೀಡಿಯಂ ತರಗತಿಯಲ್ಲಿ ಕಲಿಯುತ್ತಿದ್ದಾಳೆ.ಪ್ರಕೃುತಿ  19/07/2016 ರಂದು  ಜನ್ಮತಾಳಿದ ಪುಟ್ಟ ಬಾಲಕಿ.ತಂದೆ- ಪರಸಪ್ಪ ನ್ಯಾಮಗೌಡ ,ತಾಯಿ – ಸಾವಿತ್ರಿ ಅವರ ಪ್ರಥಮ ಪುತ್ರಿಯಾಗಿ ಜನಿಸಿದಳು.

ಇವರ ಮೂಲ ಹುಟ್ಟೂರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದವರು.ಉತ್ತರ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಅಲ್ಲಿಯೇ ಭವಿಷ್ಯ  ಕಟ್ಟಿಕೊಂಡ  ಕುಟುಂಬ.    ಹಾಗೆಯೇ ಇತ್ತೀಚೆಗೆ ಮಗಳು ಪ್ರಕೃುತಿ ಮಹಾನ್  ಸಾಧನೆಯ ಶಿಖರ ಏರಲು ಹೊರಟಿದ್ದಾಳೆ.ಎಲ್ಲರಂತೆಯೇ ಆಟ ಆಡಿಕೊಂಡು ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ವಿಶೇಷವಾದಂತಹ ಶೈಕ್ಷಣಿಕ ಕಾಳಜಿ, ಅದಮ್ಯ ಸೆಳೆತದಿಂದ ಬದುಕಿನ ಮಜಲುಗಳನ್ನು ಹೆಜ್ಜೆಹಾಕಿ ಸಾಗುತ್ತಿದ್ದಾಳೆ.ಪ್ರಕೃತಿ ಮಾತೆಯ ಆಶೀರ್ವಾದವೆಂಬಂತೆ ಪ್ರಕೃುತಿ ಪಟಪಟನೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಚಾಕಚಕ್ಯತೆ ಕರಗತ ಮಾಡಿಕೊಂಡಿದ್ದಾಳೆ. ಆದರೆ ರಾಜ್ಯವೇ ಅಚ್ಚರಿಪಡುವಂಥ ವಿಶೇಷ ಸಾಧನೆಗೆ ಸಾಕ್ಷಿಯಾಗಿದ್ದಾಳೆ .ತರಗತಿಯಲ್ಲಿ ಕೂಡ ವಿಶೇಷವಾದಂತಹ ಮುತುವರ್ಜಿ ವಹಿಸಿ ಪಠ್ಯ – ಪಠ್ಯೇತರ ಚಟುವಟಿಗಳಲ್ಲಿ ಕೂಡ ತನ್ನನ್ನು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ .ಶಾಲಾ  ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ .ವಿದ್ಯಾಭ್ಯಾಸದಲ್ಲೂ ಮುಂಚೂಣಿ ಇರುವುದಲ್ಲದೆ ,ಕ್ರೀಡೆ ಹಾಗೂ ವಿವಿಧ ಗೀತೆಗಳಿಗೆ  ನಟನೆ ಮಾಡುವ ಚಾಕಚಕ್ಯತೆ ಹೊಂದಿಕೊಂಡಿದ್ದಾಳೆ.ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ ಈ ಬಾರಿಯ ಮಹಾನ್ ಸಾಧನೆಗೆ ಸಾಕ್ಷಿಯಾಗಿದು,ಅದುವೇ “ಇಂಡಿಯನ್ ಬುಕ್ ಆಫ್ ರೆಕಾರ್ಡ್ -2022” .ಬಹಳ ಚಾಕಚಕ್ಯತೆ ಹಾಗೂ ಚೂಟಿ ಇರುವ ಪ್ರಕೃುತಿಯ  ಸಾಧನೆ ದೇಶವೇ ಕೊಂಡಾಡಿದೆ. ಅದರಲ್ಲೂ “ಇಂಡಿಯನ್ ಬುಕ್ ಆಫ್ ರೆಕಾರ್ಡ್ -2022” ಗೆ ಸೇರ್ಪಡೆಗೊಂಡು ಅಚ್ಚರಿ ಹಾಗೂ ಹೆಮ್ಮೆ ಮೂಡಿಸಿದ್ದಾಳೆ.

ಇತ್ತೀಚೆಗೆ  ಮೊಬೈಲ್ನಲ್ಲಿ ತಾಯಿ ಸಾವಿತ್ರಿಯವರು ಇಂಡಿಯನ್  ಬುಕ್ ಆಪ್ ರೆಕಾರ್ಡ್ ಅಪ್ಡೇಟನ್ನು ಮೊಬೈಲ್ನಲ್ಲಿ ವೀಕ್ಷಿಸುತ್ತಿರುವಾಗ ,ತಮ್ಮ ಮಗಳಿಗೂ ಇಂತಹ ಸಾಧನೆಯನ್ನು ತೋರ್ಪಡಿಸಿಕೊಳ್ಳಬೇಕು ಎಂದು ಹಟ ಹಿಡಿದು ಸಾಧನೆಗೆ ನಿಂತರು ,ಸಾಧನೆ ಶಿಖರವಾಗಿ, ಬೆಟ್ಟದಷ್ಟು ಶ್ರಮ ಪಟ್ಟು ,ನಿರಂತರವಾದ ಶ್ರಮದಿಂದ ಸಾಧನೆ ಸಾಧಿಸುವಷ್ಟು ಹಂಬಲದ ವೇದಿಕೆಯಾಯಿತು.ಸರಿಸುಮಾರು( 200)ಇನ್ನೂರು ಪ್ರಶ್ನೆಗಳಿಗೆ 7ನಿಮಿಷ  (16)ಹದಿನಾರು ಸೆಕೆಂಡ್  ಅಂತರದಲ್ಲಿ ಸ್ಫೂರ್ತಿಯಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಸಾಧನೆ ಮೂಡಿಸಿದ್ದಾಳೆ.ಸಾಮಾನ್ಯ ಜ್ಞಾನದ ಪ್ರಶ್ನೆಯೊಂದಿಗೆ ಸ್ಟುಡಿಯೊದ ನೇರಪ್ರಸಾರದ ರೆಕಾರ್ಡಿಂಗ್ ಆನ್ ಲೈನ್ ನಲ್ಲಿ ಪಟಪಟನೆ ಉತ್ತರಿಸುವ ಪ್ರಕೃುತಿಯ ಸಾಧನೆ  ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಎದುರಿಸಲು ಸಾಧ್ಯವಾಯಿತು.

ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕಿಯ ವೀಡಿಯೊ ವೈರಲ್ ಆಗಿರುವುದು ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.ಸಾಧನೆ ಜಗತ್ತಿಗೆ ಮಾದರಿಯಾಗಿದ್ದು ನಿರಂತರವಾದ ಶ್ರಮ , ಸರಳತೆಯಿಂದ ಸಾಧನೆಯ ಪಥದತ್ತ ಏರಿದ್ದಾಳೆ .ಪ್ರಕೃುತಿಯ ಸಾಧನೆಗೆ ತಾಯಿ ಸಾವಿತ್ರಿ ,ತಂದೆ ಪರಸಪ್ಪ ನ್ಯಾಮಗೌಡ, ತಮ್ಮ ಚನ್ನಬಸು , ಅಜ್ಜ ಲಕ್ಷ್ಮಣ್ ,ಅಜ್ಜಿ ಮತ್ತು ನೀಲಮ್ಮ ಶಂಕ್ರಮ್ಮ, ಮೊಮ್ಮಗಳ ಸಾಧನೆಗೆ ಅಚ್ಚರಿಯ ಬೆರಗು ಮೂಡಿಸಿ ಆಶೀರ್ವದಿಸಿದಾರೆ.ಇಡೀ ರಾಜ್ಯವೇ ಸಂತಸಪಡುವ ಸುದ್ದಿಗೆ ಪ್ರಕೃತಿ ಸಾಧನೆಯ ಮೆಟ್ಟಿಲು ಏರುವ ಮೂಲಕ ಸಾಧನೆಗೈದಿದ್ದಾಳೆ.ಅವರ ಸಾಧನೆ ಜಗತ್ತಿಗೆ ಮಾದರಿಯಾಗಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್- ೨೦೨೨ ಸೇರಿರುದು ಪುಟ್ಟ ಬಾಲಕಿಯ ಹೆಮ್ಮೆಯ ಸಂಗತಿ.ಈ ಅಭೂತಪೂರ್ವ ಸಾಧನೆ ಇತರರಿಗೂ ಮಾದರಿಯಾಗಲಿ ಎನ್ನುವುದೇ ಆಶಯ.

✍ ಕೆ .ಸಂತೋಷ್ ಶೆಟ್ಟಿ ,ಮೊಳಹಳ್ಳಿ ಕುಂದಾಪುರ.M:9632581508.