ಡೈಲಿ ವಾರ್ತೆ : 28 ಸೆಪ್ಟೆಂಬರ್ 2022

ವರದಿ: ಶಿವಾನಂದ ಆರ್.ಬಿದರಕುಂದಿ.

ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ ವಿಶ್ವನಾಥ್ ಬಿರಾದಾರ.

ಯಾದಗಿರಿ.(ಸೆ.28) ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತಿರುವುದರಿಂದ ಕಾಲೇಜಿನ ಎಲ್ಲಾ ಸೀಟಗಳು ಭರ್ತಿಯಾಗುತ್ತಿವೆ. ಪ್ರಾಧ್ಯಾಪಕರ ಶ್ರಮ ಮತ್ತು ಉತ್ತಮ ಬೋಧನೆಯಿಂದ ಕಾಲೇಜಿಗೆ ಹೆಸರು ಬರುತ್ತಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್ ಬಿರಾದಾರ ಹೇಳಿದರು.

ಹುಣಸಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೌಕರ್ಯಗಳು ತೊಡಕು ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಾಧ್ಯಾಪಕರ ಸಹಕಾರದಿಂದ ಪಾಠಗಳು ನಡೆಯುತ್ತಿವೆ ಎಂದರು.

ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾಭ್ಯಾಸ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಎಸ್,ಡಿ, ಎಮ್,ಸಿ,ಅಧ್ಯಕ್ಷರಾದ ಹೊನ್ನಕೇಶವದೇಸಾಯಿ, ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾದ, ಸಂತೋಷ್ ನಡುವಿಹಾಳ್, ಸಮಾಜ ಶಾಸ್ತ್ರ ಉಪ ನ್ಯಾಸಕ ರುದ್ರಗೌಡ ಬಿರಾದಾರ ಸೇರಿದಂತೆ ಕಾಲೇಜಿನ ಬೋದಕ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳು ಇದ್ದರು