



ಡೈಲಿ ವಾರ್ತೆ: 05/ಮೇ /2024


ಶಾಸಕ ಎಚ್.ಡಿ. ರೇವಣ್ಣ ನಾಲ್ಕು ದಿನ ಎಸ್‌ಐಟಿ ಕಸ್ಟಡಿಗೆ
ಬೆಂಗಳೂರು : ಶಾಸಕ ಎಚ್‌ಡಿ ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ SIT ಕಸ್ಟಡಿಗೆ ನೀಡಲಾಗಿದೆ.
ಮೇ 8 ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಆದೇಶಿಸಿದ್ದಾರೆ.
ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ನಿನ್ನೆ ಬಂಧಿಸಿದ್ದ ಸಿಐಡಿ ವಿಶೇಷ ತನಿಖಾ ತಂಡ(SIT) ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸಿತ್ತು.
ಬಂಧಿತರಾಗಿರುವ ಹೆಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಕಚೇರಿಯಿಂದ ಭದ್ರತೆಯಲ್ಲಿ ಕರೆತಂದು ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ನಂತರ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಅವರ ಮುಂದೆ ಎಸ್‌ಐಟಿ ತಂಡ ರೇವಣ್ಣನವರನ್ನು ಹಾಜರುಪಡಿಸಿದೆ. ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ರೇವಣ್ಣ ಪರ ವಕೀಲ ಮೂರ್ತಿ ಡಿ. ನಾಯಕ್ ಮೊದಲಾದವರಿದ್ದರು.