ಡೈಲಿ ವಾರ್ತೆ: 01 ನವಂಬರ್ 2022

✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ .(ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)

ಕನ್ನಡದ ನೆಲದಲ್ಲಿ ನಿತ್ಯೋತ್ಸವದ ಸಂಭ್ರಮ….!”ನಾಡು, ನುಡಿ ,ನೆಲ, ಜಲ, ಭಾಷೆಗೆ ಸಮ್ರದ್ಧವಾಯಿತು ಭವ್ಯ ಕರ್ನಾಟಕ….!”(ಕನ್ನಡ ರಾಜ್ಯೋತ್ಸವ ಪ್ರಯುಕ್ತ ಡೈಲಿ ವಾರ್ತೆ ವಿಶೇಷ ಲೇಖನ)

  • ಉಸಿರಾಗಲಿ ಕನ್ನಡ….!” ಹಸಿರಾಗಲಿ ಕನ್ನಡ…!” ಕನ್ನಡ ರಾಜ್ಯದಲ್ಲಿ ಮೇಳೈಸುತ್ತಿದೆ ರಾಜ್ಯೋತ್ಸವದ ಸಂಭ್ರಮ….!”ನುಡಿ ಕನ್ನಡ… ನಡೆ ಕನ್ನಡ…!”

ಕನ್ನಡ ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕನ್ನಡ ನಾಡಿನ ನೆಲ -ಜಲ – ಸಂಸ್ಕ ತಿ -ಕಲೆ ಇವುಗಳನ್ನು ನಡೆಸಿಕೊಂಡು ರೂಢಿಸಿಕೊಂಡು ಬಂದಿರುವ ಕನ್ನಡ ಸಂಸ್ಕೃತಿ ನಮ್ಮದು. ಕನ್ನಡಕ್ಕಾಗಿ ಸಾವಿರಾರು ಜನರ ಪ್ರಾಣ ತೆತ್ತ ಕನ್ನಡ ನಾಡಿನಲ್ಲಿ ರಾಜ್ಯೋತ್ಸವ ಸಂಭ್ರಮ.ಉಸಿರು ಕನ್ನಡ ಹಸಿರು ಕನ್ನಡ ಬದುಕುವ ಪ್ರತಿಯೊಂದು ಜೀವಿಗಳಿಗೂ ಕನ್ನಡದ ಸಂಭ್ರಮದ ದಿನ ಅದೇ ನವೆಂಬರ್ ಒಂದರ ಕ್ಷಣದ ಗಳಿಗೆ.. !ಈ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಕನ್ನಡದ ಇಂಪು ಜಗದಗಲ ಪಸರಿಸುವಂತಹ ವಿಶೇಷ ರೀತಿಯ ಸ್ಥಾನಮಾನ ಕಂಡುಕೊಂಡಿದೆ. ಹಚ್ಚೇವು ಕನ್ನಡದ ದೀಪ ಎನ್ನುವಂತೆ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯ ನೆಲೆಯಲ್ಲಿ ಕನ್ನಡಕ್ಕಾಗಿ ಈ ಸಮೃದ್ಧ ನೆಲ ಕಟ್ಟಿಬದ್ಧವಾಗಿದೆ ಎನ್ನುವಲ್ಲಿ ವಿಶೇಷ ಸ್ಥಾನಮಾನ ಕಂಡುಕೊಂಡಿದೆ ಅದು ಕನ್ನಡದ ತೇರು, ಕನ್ನಡದ ಭುವಿ, ಕನ್ನಡದ ಭಾಷೆ, ಕನ್ನಡದ ಜಲ, ಕನ್ನಡದ ನೆಲ, ಕನ್ನಡದ ಸಂಸ್ಕೃತಿ, ಇವೆಲ್ಲವೂ ಕನ್ನಡತನವನ್ನು ಹೆಚ್ಚಿಸುವಲ್ಲಿ ಕನ್ನಡನಾಡಿನಲ್ಲಿ ವಿಶೇಷ ಪಾತ್ರ ಕನ್ನಡ ನೆಲದಲ್ಲಿ ಅನ್ವಯಿಸುತ್ತದೆ.



ನಾಡಿನಾದ್ಯಂತ ರಾಜ್ಯೋತ್ಸವದ ಸಂಭ್ರಮ :-
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನವನ್ನು ನಿರಂತರವಾಗಿ ಶ್ಲಾಘಿಸಲಾಗುತ್ತದೆ. ಕರ್ನಾಟಕವನ್ನು ಈ ದಿನದಂದು ರೂಪಿಸಲಾಗಿದೆ, ಆದ್ದರಿಂದ ಈ ದಿನವನ್ನು ಕನ್ನಡ ದಿನ, ಕರ್ನಾಟಕ ರಚನೆ ದಿನ ಅಥವಾ ಕರ್ನಾಟಕ ದಿನ ಎಂದು ಕರೆಯಲಾಗುತ್ತದೆ. ರಾಜ್ಯೋತ್ಸವವು ರಾಜ್ಯದ ಪರಿಚಯವನ್ನು ಸೂಚಿಸುತ್ತದೆ. 1956 ರಲ್ಲಿ, ಭಾರತದಲ್ಲಿ ಕನ್ನಡ ಮಾತನಾಡುವ ಪ್ರತಿಯೊಂದು ಪ್ರದೇಶವನ್ನು ಬೆರೆಸಿ ರಾಜ್ಯವನ್ನು ರಚಿಸಲಾಯಿತು, ಅದಕ್ಕೆ ಕರ್ನಾಟಕ ಎಂದು ಹೆಸರಿಸಲಾಯಿತು. ಭಾಷೆಯಲ್ಲಿ ಸಂವಹನವು ಕನ್ನಡವಾಗಿತ್ತು. ಈ ದಿನವನ್ನು ರಾಜ್ಯ ಸಂದರ್ಭವೆಂದು ಉಚ್ಚರಿಸಲಾಗುತ್ತದೆ. ಕರ್ನಾಟಕದ ವ್ಯಕ್ತಿಗಳು ಕನ್ನಡ ರಾಜ್ಯೋತ್ಸವ ದಿನವನ್ನು ಅಸಾಧಾರಣ ವೈಭವದಿಂದ ಆಚರಿಸುತ್ತಾರೆ ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಾದ್ಯಂತ ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ರಾಜ್ಯದಾದ್ಯಂತ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳನ್ನು ಹಾರಿಸಲಾಗುತ್ತದೆ ಮತ್ತು ಕನ್ನಡ ಗೀತೆ (“ಜಯ ಭಾರತ ಜನನಿಯ ತನುಜಾತೆ”) ಮೊಳಗುವುದರಿಂದ ಇಡೀ ರಾಜ್ಯವು ಈ ದಿನದಂದು ಹಬ್ಬದ ನೋಟವನ್ನು ಧರಿಸುತ್ತದೆ. ಕರ್ನಾಟಕ ಪದದ ಮೂಲದ ಬಗ್ಗೆ ಅನೇಕ ಅಭಿಪ್ರಾಯಗಳಿದ್ದರೂ, ಸಾಮಾನ್ಯವಾಗಿ “ಕರುನಾಡು” ಪದವು “ಉನ್ನತ ಭೂಮಿ” ಅಂದರೆ “ಕರು” ಮತ್ತು “ನಾಡು” ಎಂಬ ಪದದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಕರು ಕಪ್ಪಾಗಿದ್ದರೆ, ಭೂಮಿಯನ್ನು ಬಯಲು ಸೀಮೆಯಲ್ಲಿ ಕಾಣುವ ಕಪ್ಪು ಹತ್ತಿ ಮಣ್ಣು ಎಂದು ಹೇಳಲಾಗುತ್ತದೆ. ಬ್ರಿಟಿಷರ ಕಾಲದಲ್ಲಿ ಕೃಷ್ಣಾ ನದಿಯ ಎರಡೂ ಬದಿಯಲ್ಲಿ ಜಲರಾಶಿಯಾಗಿದ್ದರಿಂದ ಕರ್ನಾಟಕ ಅಥವಾ ಕರ್ನಾಟಿಕ್ ಹೆಸರನ್ನು ಬಳಸಲಾಗುತ್ತಿತ್ತು.ಕರ್ನಾಟಕ ಹುಟ್ಟಿಗೆ ಕಾರಣರಾದ ಕನ್ನಡ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟ ರಾವ್ ರವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿ ಯನ್ನು ಸ್ವಾತಂತ್ರ್ಯ ಪೂರ್ವವೇ 1905 ರಲ್ಲಿ ಪ್ರಾರಂಭಿಸಿದರು.ನಂತರ ಭಾರತ ಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯ ವಾದ ನಂತರ ಭಾಷೆಗಳ ಆಧಾರದ ಮೇಲೆ 1956 ನವೆಂಬರ್ 1 ರಂದು ರಾಜ್ಯ ಗಳನ್ನು ವಿಂಗಡಿಸಿದರು. ಅದರಂತೆ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ಮೈಸೂರು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಉತ್ತರ ಕರ್ನಾಟಕ, ಹಳೆಮೈಸೂರು, ಮಲೆನಾಡು.1973 ರ ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯ ವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಧರ್ಮ, ಜಾತಿ ಲಿಂಗ ಬೇಧ ವಿಲ್ಲದೆ ರಾಜ್ಯಾದ್ಯಂತ ಅನೇಕ ಜನರು ಕರ್ನಾಟಕ ದಾದ್ಯಂತ ರಾಜ್ಯ ಧ್ವಜದ ಕೆಂಪು ಮತ್ತು ಹಳದಿ ಗಳನ್ನು ಪ್ರದರ್ಶಿಸುತ್ತಾರೆ.ಕನ್ನ‍ಡ ರಾಜ್ಯೋತ್ಸವ ವನ್ನು ಸಂಭ್ರಮ ದಿಂದ ಆಚರಿಸ ಲು ಎಲ್ಲ ಡಿ ಸಕಲ ಸಿದ್ಧತೆಗಳು ನಡೆಯುತ್ತಿದೆ ಮತ್ತು ವಿವಿಧ ಕಾರ್ಯಕ್ರಮ ಗಳು ಸ್ಪರ್ಧೆ ಗಳನ್ನು ಏರ್ಪಡಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವ ವನ್ನು ಸಂಭ್ರಮದಿಂದ ಉತ್ಸಾಹದಿಂದ ಆಚರಿಸಲು ಎಲ್ಲ ಕಡೆ ಸಕಲ ಸಿದ್ಧತೆಗಳನ್ನು ನಡೆಸುತ್ತಾರೆ ಮತ್ತು ವಿವಿಧ ಕಾರ್ಯಕ್ರಮಗಳು ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಕನ್ನಡ ಸಂಸ್ಕೃತಿಯ ಬಹುತೇಕ ಭಾಷೆ ಮತ್ತು ನೆಲ ಜಲವನ್ನು ಸಂರಕ್ಷಿಸುವ ಕಾರ್ಯಕ್ರಮಗಳು ಕರ್ನಾಟಕ ಸರಕಾರದಿಂದ ನಿರಂತರವಾಗಿ ನಡೆಯುತ್ತಿದೆ. ಅದಲ್ಲದೆ ಕನ್ನಡ ಭಾಷೆಗೂ ಕನ್ನಡ ಸಂಘಟನೆಗಳು ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದೆ.



ಕರ್ನಾಟಕ ಹೆಸರು ಬಂದದ್ದು ಹೇಗೆ…:-
ಕರ್ನಾಟಕ ಪದದ ಮೂಲ ಸಂಸ್ಕೃತ. ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ.ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಇನ್ನೂ ಹಲವು ಅಭಿಪ್ರಾಯಗಳೂ ಇದೆ. ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ, ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸುತ್ತದೆ.ಉತ್ತರ ಕರ್ನಾಟಕ ಜನತೆಯ ಮಾನ್ಯತೆಗಾಗಿ ಮೈಸೂರು ಎಂಬ ಹೆಸರಿನ ಬದಲು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕು ಎಂದು 1972ರ ಜುಲೈನಲ್ಲಿ ಈ ಬಗ್ಗೆ ಚರ್ಚೆ ಭುಗಿಲೆದ್ದಿತು. ಸಾಕಷ್ಟು ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲೂ ಇದಕ್ಕೆ ಸರ್ವಾನುಮತದಿಂದ ಅನುಮತಿ ದೊರೆಯಿತು.

ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು:
ಕನ್ನಡಕ್ಕಾಗಿ ಕನ್ನಡ ಭಾಷೆಗಾಗಿ ಹೋರಾಡಿದ ಮಹನೀಯರಲ್ಲಿ ನಾವು ಇವರನ್ನು ಪ್ರಮುಖವಾಗಿ ಗುರುತಿಸುತ್ತೇವೆ .ಕೆ.ಶಿವರಾಮ ಕಾರಂತ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಮಂಗಳವೇಡೆ ಶ್ರೀನಿವಾಸರಾಯರು, ಕೆಂಗಲ್ ಹನುಂತಯ್ಯ, ಎಚ್. ಎಸ್. ದೊರೆಸ್ವಾಮಿ, ಕೋ. ಚನ್ನಬಸಪ್ಪ, ಅಲ್ಲಂ ಸುಮಂಗಳಮ್ಮ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ, ಹಾರನಹಳ್ಳಿ ರಾಮಸ್ವಾಮಿ, ಎ.ಎನ್.ಕೃಷ್ಣರಾವ್, ಬಿ. ಎಂ. ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್, ಆಚಾರ್ಯ, ಜಿ. ಬಿ. ಜೋಷಿ, ಕೆ. ವಿ. ಅಯ್ಯರ್, ವಿ. ಬಿ. ನಾಯಕ್, ಕರ್ಣ, ಗಂಗಾಧರ ದೇಶಪಾಂಡೆ, ಡೆಪ್ಯುಟಿ ಚೆನ್ನಪಬಸಪ್ಪ ಸೇರಿದಂತೆ ಹಲವು ಮಂದಿ ಕನ್ನಡಕ್ಕಾಗಿ ಹೋರಾಡಿದ್ದಾರೆ.

ಒಟ್ಟಾರೆಯಾಗಿ ಕನ್ನಡ ನೆಲ, ಜಲ ಭಾಷೆಗಾಗಿ ಕನ್ನಡ ಸಂಸ್ಕತಿಗಾಗಿ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದೆ ಜಗದಗಲ ಪಸರಿಸುವ ಕನ್ನಡ ಸಂಸ್ಕೃತಿಯನ್ನು ಬೆಳೆಸುವಲ್ಲಿ ಕಟ್ಟಿಬದ್ಧರಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸಿ ಸಾಂಸ್ಕೃತಿಕವಾಗಿ ಮುನ್ನಡೆಸುವಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿರಬೇಕು. ಆಗ ಮಾತ್ರ ಕನ್ನಡ ಭಾಷೆಯ ಸಂಸ್ಕೃತಿ ಉಳಿವಿಗೆ ಸಾಧ್ಯವಿದೆ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.