ಡೈಲಿ ವಾರ್ತೆ: 01 ನವಂಬರ್ 2022

ವರದಿ: ಶಿವಾನಂದ ಆರ್.ಬಿದರಕುಂದಿ.

ಕಲಬುರಗಿ: ಕಬ್ಬಿಗೆ ಎಫ್‌ಆರ್‌ಪಿಯಿಂದ ಪ್ರತಿಭಟನೆ, 3 ಗಂಟೆ ರಸ್ತೆ ತಡೆ.


ಕಲಬುರಗಿ: ಕಬ್ಬಿಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ(ಎಫ್‌ಆರ್‌ಪಿ) ಹೆಚ್ಚಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ದರ ಹೆಚ್ಚಳದ ಅಧಿಕೃತ ಭರವಸೆ ಹಾಗೂ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು. ಈ ಬಗ್ಗೆ ತಕ್ಷಣ ಸ್ಪದಿಸದೆ ಇದ್ದರೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ನಡೆಯಲಿದೆ. ಇದಕ್ಕೆ ಅವಕಾಶ ನೀಡದೆ ಇದ್ದರೇ ಅನಿರ್ದಿಷ್ಟಾವಧಿಯವರೆಗೆ ರಸ್ತೆಯ ಮೇಲೆ ಕುಳಿತು ಪ್ರತಿಭಟಿಸುವುದಾಗಿ ಹೇಳಿ ಬೆಳಿಗ್ಗೆ 11:30 ರಿಂದ ಎಸ್‌ವಿಪಿ ವೃತ್ತ- ಮಾರ್ಕೆಟ್ ರಸ್ತೆ ತಡೆದು ಧರಣಿ ಕುಳಿತಿದ್ದಾರೆ.

ಬೆಳೆಗಾರರು ಮತ್ತು ಪೊಲೀಸರು ನಡೆವೆ ನೂಕಾಟ: ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಲು ಮುಂದಾದ ಪ್ರತಿಭಟನಾ ನಿರತ ಪೊಲೀಸರ ಪ್ರವೇಶ ದ್ವಾರದಲ್ಲಿ ತಡೆದರು. ‘ನಾವು ನಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡಲು ಡಿ.ಸಿ. ನ್ಯಾಯಯುತ ಹಕ್ಕು ಪಡೆಯಲು ಅಡ್ಡಿಪಡಿಸಬೇಡಿ’ ಎಂದರು.

ಪ್ರತಿಭಟನೆ ನಿರತರು ಒಳನುಗ್ಗಲು ಯತ್ನಿಸಿದ್ದರು. ಈ ವೇಳೆ ಮತ್ತು ಪ್ರತಿಭಟನಾ ನಿರತರ ನಡುವೆ ನೂಕಾಟ ನಡೆಯಿತು. ತಕ್ಷಣ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಇಸಿಪಿ ದೀಪನ್, ಸಂಚಾರ ಪೊಲೀಸ್ ಸಿಪಿಐ ಶಾಂತಿನಾಥ ಅವರಿಗೆ ಧಾವಿಸಿ ವಾತಾವರಣವನ್ನು ತಿಳಿಗೊಳಿಸಿದರು. ರಸ್ತೆಯ ಮೇಲೆ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಪ್ರತಿಭಟನಾ ನಿರತರ ಬೇಡಿಕೆಗಳನ್ನು ಆಲಿಸಿ, ಒಂದು ಗಂಟೆ ಅವಕಾಶ ನೀಡುವಂತೆ ಮನವಿ ಮಾಡಿ ಕಚೇರಿಗೆ ತೆರಳಿದರು. ಬೇಡಿಕೆ ಇಡುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನೆಯಲ್ಲಿ ತೊಡಗಿದರು.

ಸುಮಾರು 3 ಗಂಟೆ ರಸ್ತೆ ತಡೆಯಿಂದ ಜಿಲ್ಲಾ ಕೋರ್ಟ್ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಮಾರುಕಟ್ಟೆ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಕಂಡುಬಂತು.